ಉಳ್ಳಾಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಕಿನ್ಯ ಸೆಕ್ಟರ್ ಇದರ ಅಧೀನದ ಎಸ್ ಎಸ್ ಎಫ್ ಬೆಳರಿಂಗೆ ಶಾಖೆಯ ವತಿಯಿಂದ ಧ್ವಜ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ನಡೆಯ್ತು.ನೂರುಲ್ ಉಲಮಾ ಮದ್ರಸ ಸದರ್ ಮುಅಲ್ಲಿಮ್ ಶೌಕತ್ ಸಖಾಫಿ ಉಸ್ತಾದ್ ದುಆ ನಿರ್ವಹಿಸಿ ಧ್ವಜ ದಿನದ ಬಗ್ಗೆ ಇಸ್ಲಾಮಿನಲ್ಲಿರುವ ಸಂಭಂಧವನ್ನು ವಿವರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಎಲ್ಲಾ ನಾಯಕರ ಸಮ್ಮುಖದಲ್ಲಿ ಧ್ವಜಾರೋಹಣ ನಡೆಸಲಾಯ್ತು.
ಇದೇ ಸಂದರ್ಭದಲ್ಲಿ ಸಂಘಟನಾ ನಾಯಕರಾದ K.H ಇಸ್ಮಾಯಿಲ್ ಸಅದಿ ಕಿನ್ಯ ಮಾತನಾಡಿ, ಎಸ್ಸೆಸ್ಸೆಫ್ ಸಂಘಟನೆಯ ಕಾರ್ಯವೈಖರಿಯನ್ನು ವಿವರಿಸಿ ಸಂಘಟನೆಯ ಅಭಿವೃದ್ದಿಗೆ ಎಲ್ಲರೂ ಜತೆಗೂಡಿ ಸಹಕರಿಸಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದು ಸಂದೇಶ ನೀಡಿದರು.
ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಫಾರೂಕ್ ಕಿನ್ಯ ಹಾಗೂ V.A ಮೊಹಮ್ಮದ್ ಉಸ್ತಾದ್, ಶರೀಫ್ ಸಅದಿ ಕಿನ್ಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬುಖಾರಿ ಜುಮಾ ಮಸ್ಜಿದ್ ಉಪಾಧ್ಯಕ್ಷರಾದ K.H ಮೂಸಕುಂಞ, KCF ಸದಸ್ಯ ಇಬ್ರಾಹಿಂ ಖಲೀಲ್,ಅಝೀಝ್ ಕೋಟಡಿ,ಶರೀಫ್ ಸಖಾಫಿ, ಇರ್ಷಾದ್ ಮುಸ್ಲಿಯಾರ್,SSF ನಾಯಕರಾದ ನುಹ್ಮಾನ್, ಸಿಧ್ಧೀಕ್,ಸುಫೈಲ್,ಸಾಧಿಕ್,ಝಿಯಾದ್ ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಫಯಾಝ್ ಕಿನ್ಯ ಕಾರ್ಯಕ್ರಮಕ್ಕೆ ಸ್ವಾಗತಿಸಿ ನಿರೂಪಿಸಿದರು.