janadhvani

Kannada Online News Paper

ಪರಪ್ಪುವಿನಲ್ಲಿ ವಿಜೃಂಭಣೆಯ ಧ್ವಜದಿನ ಕಾರ್ಯಕ್ರಮ

ಬೆಳ್ತಂಗಡಿ:  ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ 30 ನೇ ವರ್ಷಕ್ಕೆ ಪಾದಾರ್ಪಣೆಗೆಯ್ಯುವ ಸಂಭ್ರಮದಲ್ಲಿ  SSF ಪರಪ್ಪು ಮತ್ತು ಗೇರುಕಟ್ಟೆ ಶಾಖೆಯ ವತಿಯಿಂದ  ಧ್ವಜಾರೋಹಣ ಕಾರ್ಯಕ್ರಮ ಪರಪ್ಪು ದರ್ಗಾ ವಠಾರದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.

ಪಿ ಎಸ್ ಮುಹಮ್ಮದ್ ಮದನಿ ಯವರ ನೇತೃತ್ವದಲ್ಲಿ ದರ್ಗಾ ಝಿಯಾರತ್ ಮೂಲಕ SYS ಅಧ್ಯಕರಾದ ಅಬ್ದುಲ್ ಖಾದರ್ ಹಾಜಿಯ ನೇತೃತ್ವದಲ್ಲಿ ನಡೆದ  ಸಮಾರಂಭದಲ್ಲಿ SSF ಪರಪ್ಪು ಶಾಖೆಯ ಅಧ್ಯಕ್ಷರಾದ ಬರಹಗಾರ ಮಿತ್ರ ಮುಸ್ತಫಾ ಹಿಮಮಿ ಮತ್ತು ಮನ್ಶರ್ ಅಕಾಡೆಮಿ ಯ ಮುದರ್ರಿಸ್ ಯೂಸುಫ್ ರಝಾ ಅಂಜದಿ ಅಲ್ ಅಫ್ಳಲಿ ದಾವಣಗೆರೆ ವಿಷಯ ಮಂಡಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಪರಪ್ಪು ಮದ್ರಸ ಮುಅಲ್ಲಿಂ ಇಬ್ರಾಹಿಂ ಖಲೀಲ್ ಮುಸ್ಲಿಯಾರ್, SYS ಕೋಶಾಧಿಕಾರಿ ಅಬೂಸ್ವಾಲಿಹ್ ,SSF ಗೇರುಕಟ್ಟೆ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಮಾಸ್ಟರ್,ಜೊತೆ ಕಾರ್ಯದರ್ಶಿ ಫಯಾಝ್ ಗೇರುಕಟ್ಟೆ ಹಾಗೂ SSF ಪರಪ್ಪು ಮತ್ತು ಗೇರುಕಟ್ಟೆ ಶಾಖೆಯ , ಕಾರ್ಯಕರ್ತರು ಉಪಸ್ಥಿತರಿದ್ದರು.ಮುಸ್ತಫಾ ಹಿಮಮಿ ಸ್ವಾಗತಿಸಿ, SSF ಗೇರುಕಟ್ಟೆ ಶಾಖೆಯ ಅಧ್ಯಕ್ಷರಾದ ಸೈಫುಲ್ಲಾ ವಂದಿಸಿದರು.

error: Content is protected !! Not allowed copy content from janadhvani.com