janadhvani

Kannada Online News Paper

ಕಬಡ್ಡಿ ಪಂದ್ಯಾಟದಲ್ಲಿ ಮನ್-ಶರ್ ಸ್ಕೂಲ್ ವಿಧ್ಯಾರ್ಥಿ ಹಾಶಿರ್ ರಾಜ್ಯ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ:ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಂಟ್ವಾಳ ಹಾಗೂ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸುರಿಬೈಲು ಇದರ ಜಂಟಿ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಕಬಡ್ಡಿ ಪಂದ್ಯಾಟದಲ್ಲಿ ಮನ್-ಶರ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಗೇರುಕಟ್ಟೆ ವಿದ್ಯಾರ್ಥಿ ಮುಹಮ್ಮದ್ ಹಾಶಿರ್ ಮದ್ದಡ್ಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದಲ್ಲದೆ ಉತ್ತಮ ಕ್ಯಾಚರ್ ಪ್ರಶಸ್ತಿಯ ಜೊತೆಗೆ ಉತ್ತಮ ಮುನ್ನಡೆಯ ಆಟಗಾರ ಎಂಬ ನೆಲೆಯಲ್ಲಿ ಸಾವಿರ ರುಪಾಯಿಯ ನಗದನ್ನು ತನ್ನದಾಗಿಸಿಕೊಂಡಿದ್ದಾನೆ.ಇದೇ ಬರುವ ಸೆಪ್ಟೆಂಬರ್ 19 ಮತ್ತು 20ನೇ ತಾರೀಖು ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿಧ್ಯಾರ್ಥಿಯು ಸ್ಪರ್ಧಾರ್ಥಿಯಾಗಿ ಭಾಗವಹಿಸಲಿದ್ದು, ಮನ್-ಶರ್ ಇಂಗ್ಲಿಷ್ ಮೀಡಿಯಂ ದೈಹಿಕ ಶಿಕ್ಷಕ ಮೊಹಮ್ಮದ್ ಆಶಿಕ್ ಮಡಂತ್ಯಾರ್ ಅವರಿಂದ ವಿಧ್ಯಾರ್ಥಿಯು ತರಬೇತಿ ಪಡೆದಿದ್ದು ಮರ್ಹೂಂ ಇಂತಿಯಾಝ್ ಹಾಗೂ ಆಮಿನಮ್ಮ ಮದ್ದಡ್ಕ ದಂಪತಿಯ ಸುಪುತ್ರನಾಗಿದ್ದಾನೆ.

error: Content is protected !! Not allowed copy content from janadhvani.com