janadhvani

Kannada Online News Paper

ಅಲ್ ಮದೀನಾ ಅಲುಮ್ನಿ ವಾರ್ಷಿಕ ಮಹಾಸಭೆ-2018

ಮಂಜನಾಡಿ: ಕರುನಾಡ ಮರ್ಕಝ್ ಅಲ್ ಮದೀನಾ ಮಂಜನಾಡಿ ಇದರ ಪೂರ್ವ ವಿದ್ಯಾರ್ಥಿಗಳ ಸಂಘಟನೆಯಾದ ಅಲ್ ಮದೀನಾ ಅಲುಮ್ನಿ ವಾರ್ಷಿಕ ಮಹಾಸಭೆ ಸೆಪ್ಟಂಬರ್ 16ರಂದು ಅಲ್ ಮದೀನಾ ಕ್ಯಾಂಪಸ್’ನಲ್ಲಿ ಜರಗಿತು.

ಅಲ್ ಮದೀನಾ ಸಂಸ್ಥೆಯ ಶಿಲ್ಪಿಯೂ, ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಆದ ಶೈಖುನಾ ಶರಫುಲ್ ಉಲಮಾ ಪಿ.ಎಂ ಅಬ್ಬಾಸ್ ಮುಸ್ಲಿಯಾರ್ ಇವರ ಅಧ್ಯಕ್ಷತೆಯಲ್ಲಿ ಅಲ್ ಮದೀನಾ ಜನರಲ್ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ಅಲ್ ಮದೀನಾ ದಅವಾ ಕಾಲೇಜು ಮುದರ್ರಿಸ್ ಅಬ್ದುಲ್ ಅಝೀಝ್ ಅಹ್ಸನಿ, ಸಯ್ಯದ್ ಝೈನುಲ್ ಆಬಿದ್ ಅಲ್-ಹೈದ್ರೊಸಿ ತಂಙಳ್ ಕಿನ್ಯ ಶುಭ ಕೋರಿ    ಭಾಷಣ ಮಾಡಿದರು. ಅಲ್ ಮದೀನಾ ಅಲುಮ್ನಿ ಪ್ರ. ಕಾರ್ಯದರ್ಶಿ ಇಕ್ಬಾಲ್ ಮರ್ಝೂಖಿ ಸಖಾಫಿ ವರದಿ ಮಂಡಿಸಿದರು.

ನೂತನ ಸಮಿತಿ : ಸಯ್ಯದ್ ಝೈನುಲ್ ಆಬಿದ್ ಅಲ್-ಹೈದ್ರೊಸಿ ತಂಙಳ್ ಕಿನ್ಯ (ನಿರ್ದೇಶಕರು), LH ಮುಹಮ್ಮದ್ ಶರೀಫ್ ಸಅದಿ ಮೂಡಬಿದ್ರೆ (ಅದ್ಯಕ್ಷರು), ಝೈನುಲ್ ಆಬಿದ್ ಮದನಿ ಕಲ್ಮಂಜ, ಅಶ್ರಪ್ ಬಾಳೆಪುಣಿ (ಉಪಾಧ್ಯಕ್ಷರು), SI ಇಕ್ಬಾಲ್ ಮರ್ಝೂಖಿ ಗೇರುಕಟ್ಟೆ (ಪ್ರಧಾನ ಕಾರ್ಯದರ್ಶಿ), ಬಶೀರ್ ಸಾಂಬಾರ್ ತೋಟ (ಕೋಶಾಧಿಕಾರಿ), ನಿಝಾರ್ ಗುರುಪುರ, ಅಬ್ದುಲ್ ಕರೀಮ್ ಅಡ್ಕರೆ (ಜೊತೆ ಕಾರ್ಯದರ್ಶಿಗಳು), ಇಮ್ತಿಯಾಝ್ ಸಜಿಪ (ವರ್ಕಿಂಗ್ ಕಾರ್ಯದರ್ಶಿ), ಅಬ್ದುಲ್ ಖಾದರ್ ಪಾವೂರ್ (ಸಂಚಾಲಕ), ಶಮೀರ್ ಬಾಳೆಪುಣಿ (ಮಾಧ್ಯಮ ಕಾರ್ಯದರ್ಶಿ), ಸಿದ್ದೀಕ್ ಅಹ್ಸನಿ ಅಸೈಗೋಳಿ(ಲೆಕ್ಕ ಪರಿಶೋಧಕರು), ಮುಹಮ್ಮದ್ ಕುಂಞಿ ಅಂಜದಿ, ಹಮೀದ್ ಸಅದಿ ಉರ್ಣಿ, ಶಾಫಿ ಮದನಿ ಹರೇಕಳ ಪಾವೂರು, ಅಬ್ದುಲ್ ಖಾದರ್ ಝುಹ್ರಿ, ಯೂಸುಫ್ ಹನೀಫಿ ಉಳ್ಳಾಲ್, ಮುಸ್ತಫ ಕುಡ್ತಮುಗೇರ್, ಅನ್ಸಾಫ್ ಮಂಜೇಶ್ವರ, ಅಝೀಝ್ ನೆಕ್ಕರೆ, ಹಾರಿಸ್ ಸಾಲೆತ್ತೂರ್, ಸ್ವಾದಿಕ್ ಮೊಂಟೆಪದವು, ಇಬ್ರಾಹೀಂ ಕೃಷ್ಣಾಪುರ, ಮುಹಮ್ಮದ್ ಮದನಿ ಉಳ್ಳಾಲ, ಸಿದ್ದೀಕ್ ಕುಕ್ಕಿಲ, ಹೈದರ್ ಕಲ್ಲರಕೋಡಿ, ಮಸೂದ್ ಬಾ ಹಸನಿ ತೌಡುಗೊಳಿ, ಅನ್ವರ್ ಮರ್ಝೂಖಿ ಸಖಾಫಿ ಜೋಕಟ್ಟೆ, ಫೈಝಲ್ ಮೂಳೂರು, ಮೂಸ ಶಾಕಿರ್ ಗುರುಪುರ (ಸದಸ್ಯರು)

ಅಲುಮ್ನಿ ಅಧ್ಯಕ್ಷರಾದ LH ಮುಹಮ್ಮದ್ ಶರೀಫ್ ಸಅದಿ ಮುಡಬಿದ್ರೆ ಸ್ವಾಗತಿಸಿ ಅಬ್ದುಲ್ ಕರೀಮ್ ಅಡ್ಕರೆ ವಂದಿಸಿದರು. ಅನ್ವರ್ ಮರ್ಝೂಖಿ ಸಖಾಫಿ ಜೋಕಟ್ಟೆ ಖಿರಾಅತ್ ಪಠಿಸಿದರು.

error: Content is protected !! Not allowed copy content from janadhvani.com