janadhvani

Kannada Online News Paper

ಕಾಪು ಎಸ್ಸೆಸ್ಸೆಫ್ ಕಛೇರಿ ಉದ್ಘಾಟನಾ ಸಮಾರಂಭ

ಹೆಜಮಾಡಿ: ಮುಳೂರು ಬಸ್ ನಿಲ್ದಾನದ ಬಳಿ ಇರುವ ಮಕ್ಕಾ ಕಾಂಪ್ಲೆಕ್ಸ್ ನಲ್ಲಿರುವ ಎಸ್ಸೆಸ್ಸೆಫ್ ಕಾಪು ಡಿವಿಷನ್ ಸಮಿತಿಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಡಿವಿಷನ್ ಅಧ್ಯಕ್ಷರಾದ ಅಲ್ಹಾಜ್ ಮುಹ್ಯದ್ದೀನ್ ಸಖಾಫಿ ಪಯ್ಯಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಸುನ್ನೀ ಕೋ-ಓರ್ಡಿನೇಶನ್ ಇದರ ಅಧ್ಯಕ್ಷ ರಾದಂತಹ ಅಲ್ಹಾಜ್ ಬಿ.ಕೆ ಅಬ್ದುರ್ರಹ್ಮಾನ್ ಮದನಿ ಕಛೇರಿಯನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷರಾದ ಅಶ್ರಫ್ ರಝಾ ಅಂಜದಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಇಹ್ಸಾನ್ ಇದರ ನಾಯಕರಾದ ಅಲ್ಹಾಜ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ , ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಎನ್.ಸಿ ರಹೀಂ ಕಾರ್ಕಳ ಆಶಂಸಾ ಮಾತುಗಳನ್ನಾಡಿದರು.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾದ ಅಹ್ಮದ್ ಶಬೀರ್ ಸಖಾಫಿ, ಕಾಪು ಡಿವಿಷನ್ ಉಪಾಧ್ಯಕ್ಷ ರಾದ ಶಾಹುಲ್ ಹಮೀದ್ ನ ಈಮಿ, ಎಸ್.ವೈ.ಎಸ್ ಪಡುಬಿದ್ರಿ ಸೆಂಟರ್ ಪ್ರ.ಕಾರ್ಯದರ್ಶಿ ಹನೀಫ್ ಹಾಜಿ ಕನ್ನಂಗಾರ್, ಉಪಸ್ಥಿತಿಯಿದ್ದರು.


ಎಸ್ಸೆಸ್ಸೆಫ್ ಕಾಪು ಡಿವಿಷನ್ ಪ್ರ.ಕಾರ್ಯದರ್ಶಿ ಮುಹಮ್ಮದ್ ಸಮೀರ್ ಕೋಡಿ ಸ್ವಾಗತಿಸಿದರು, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ರಕೀಬ್ ಕನ್ನಂಗಾರ್ ವಂದಿಸಿದರು. ಪ್ರಕಟಣೆ ಪಿ.ಎಂ.ಎಸ್ ಸಿದ್ದೀಕ್ ಪಡುಬಿದ್ರಿ.

error: Content is protected !! Not allowed copy content from janadhvani.com