janadhvani

Kannada Online News Paper

ಕೆ.ಸಿ.ಎಫ್.ಒಮಾನ್ ವಾರ್ಷಿಕ  ಕೌನ್ಸಿಲ್

ಕೆ.ಸಿ.ಎಫ್.ಒಮಾನ್   ರಾಷ್ಟ್ರೀಯ ಸಮಿತಿಯ ವಾರ್ಷಿಕ ಕೌನ್ಸಿಲ್ ಸಭೆಯು 07-09-2018 ಶುಕ್ರವಾರ ಅಲ್ ಫಲಾಹ್ ಮದ್ರಸ ಬರ್ಕದಲ್ಲಿ ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಇವರ ಘನ ಅಧ್ಯಕ್ಷತೆಯಲ್ಲಿ ಜರುಗಿತು. ಉರ್ದು ವಿಂಗ್ ಅಧ್ಯಕ್ಷರಾದ ಶಾಕಿರ್ ಮೌಲಾನ ಇವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು.
ಕೋಶಾಧಿಕಾರಿ ಕಾಸಿಂ ಹಾಜಿ ನಿಝ್ವ ಲೆಕ್ಕ ಪತ್ರವನ್ನು ಮಂಡಿಸಿ ಮಂಜೂರುಗೊಳಿಸಲಾಯಿತು, ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಐಸಿಎಫ್ ನಾಯಕರುಗಳಾದ ಬಹು ಇಸ್ಮಾಯೀಲ್ ಸಖಾಫಿ, ಹಾಗೂ ಜಮಾಲುದ್ದೀನ್ ಲತೀಫಿ ಬರ್ಕ ಇವರುಗಳು ಸಂಧರ್ಬೋಚಿತವಾಗಿ ಮಾತನಾಡಿದರು, ನಂತರ ಸಭೆಯಲ್ಲಿ ವಿಭಾಗವಾರು ವರದಿಯನ್ನು ಮಂಡಿಸಲಾಯಿತು.
ಇಶಾರ-ಅಕ್ಬರ್ ಉಪ್ಪಳ್ಳಿ, ಇಹ್ಸಾನ್-ಝುಬೈರ್ ಸಅದಿ ಪಟ್ರಕೋಡಿ, ಎಜುಕೇಶನ್-ಅಯ್ಯೂಬ್ ಕೋಡಿ, ಸಾಂತ್ವನ-ಶಂಸುದ್ದೀನ್ ಪಾಲ್ತಡ್ಕ, ಸಂಘಟನೆ-ಖಲಂದರ್ ಬಾವಾ ಉಸ್ತಾದ್, ಉಮ್ರಾ- ನಿಝಾರ್ ಝುಹ್ರಿ, ಹಾಗೂ ಮೀಡಿಯಾ-ಆರಿಫ್ ಕೋಡಿ ಇವರುಗಳು ಮಂಡಿಸಿದರು.
ಕಾರ್ಯಕ್ರಮದಲ್ಲಿ ಆಯಾ ಝೋನ್ ಮಟ್ಟದ ಅದ್ಯಕ್ಷರುಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಕೆಸಿಎಫ್ INC ಯ ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬೊಳ್ಮಾರ್ ಬರ್ಕ ಇವರ ನೇತೃತ್ವದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ 2018-19 ನೇ ಸಾಲಿಗೆ ಕಾರ್ಯಕಾರಿ ಸಮಿತಿಯನ್ನು ಪುನರ್ರಚಿಸಿ ಸಣ್ಣ ಬದಲಾವಣೆಗೊಳಿಸಲಾಯಿತು, ಸಹ ಕಾರ್ಯದರ್ಶಿಯಾಗಿ ಸಾಧಿಕ್‌ ಸುಳ್ಯ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಮೀಡಿಯಾ ಕಾರ್ಯದರ್ಶಿಯಾಗಿ ಅಶ್ರಫ್ ಭಾರತ್ ಸುಳ್ಯ, ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಲತೀಫ್ ತೋಡಾರ್ ಇವರನ್ನು ಆರಿಸಲಾಯಿತು. ಕಾರ್ಯಕ್ರಮದಲ್ಲಿ ಇಹ್ಸಾನ್ ವಿಭಾಗ ಅಧ್ಯಕ್ಷ ಶಮೀರ್ ಉಸ್ತಾದ್ ಹೂಡೆ, ಉಮ್ರಾ ವಿಭಾಗ ಅಧ್ಯಕ್ಷ ಗಫ್ಪಾರ್ ನಾವುಂದ ಹಾಗು ಕೆಸಿಎಫ್ ಒಮಾನ್ ರಾಷ್ಟ್ರೀಯ ಮತ್ತು ಝೋನ್ ಕೌನ್ಸಿಲ್ ಸದಸ್ಯರುಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com