janadhvani

Kannada Online News Paper

ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಕಿಲ್ಲೂರು ಸ್ವಲಾತ್ ಮಜ್ಲಿಸ್ ನಲ್ಲಿ ಪ್ರಶಸ್ತಿ ಪ್ರಧಾನ

ಬೆಳ್ತಂಗಡಿ :-ಸ್ಪಿರಿಟ್ ಆಫ್ ಸುನ್ನೀ ಮುಸ್ಲಿಂ ವಾಟ್ಸಪ್ ಗ್ರೂಪ್, ಬೆಳ್ತಂಗಡಿ ಆಯೋಜಿಸಿದ “ಕಾಲೇಜ್ ಕ್ಯಾಂಪಸ್ ನಲ್ಲಿ SSF ?” ಎಂಬ ವಿಷಯದ ಕುರಿತಾದ “ಪ್ರಬಂಧ ಸ್ಪರ್ಧೆ – 2018” ಯಲ್ಲಿ ಪ್ರಥಮ ಸ್ಥಾನ ಪಡೆದ ಅಸಪ ಗೇರುಕಟ್ಟೆ ಹಾಗೂ ದ್ವಿತೀಯ ಸ್ಥಾನವನ್ನು ಪಡೆದ ಇಬ್ರಾಹಿಂ ಖಲೀಲ್ ಪುತ್ತೂರು ಇವರಿಗೆ ಸೆ. 6 ರಂದು ನಡೆದ ಕಿಲ್ಲೂರು ಮಜ್ಲಿಸ್ ವಸೀಲತುಲ್ಲಾಹ್ ಸ್ವಲಾತ್ ಮಜ್ಲಿಸ್ ನಲ್ಲಿ ಅಸಯ್ಯದ್ ಶಿಹಾಬುದ್ದೀನ್ ಅಲ್ – ಹೈದ್ರೋಸ್ ಅಸ್ಸಖಾಫ್ ಕಿಲ್ಲೂರು ತಂಙಳ್ ರವರ ದಿವ್ಯ ಹಸ್ತದಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಪ್ರಭಾಷಣಕಾರರಾದ ನೌಫಲ್ ಸಖಾಫಿ ಕಳಸ, SYS ರಾಜ್ಯ ನಾಯಕರಾದ ಜಿ.ಎಮ್.ಕಾಮಿಲ್ ಸಖಾಫಿ ಉಸ್ತಾದ್, ಹಾಗೂ ಶರೀಫ್ ಸ-ಅದಿ ಕಿಲ್ಲೂರು ಹಾಗೂ ಇನ್ನಿತರ ಸಂಘಟನಾ ನಾಯಕರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com