ಪದ್ಮುಂಜ: ಎಸ್ಎಸ್ಎಫ್ ಪದ್ಮುಂಜ ಶಾಖಾ ವತಿಯಿಂದ ರಾಜ್ಯ ಸಮಿತಿಯ ಮೂವತ್ತನೇ ವರ್ಷಾಚರಣೆಯ ಪ್ರಯುಕ್ತ ಪದ್ಮುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗಣಕಯಂತ್ರವನ್ನು ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಖಾಧ್ಯಕ್ಷ ಅಶ್ರಫ್ ಅಂತರ ಎಸ್ ವೈ ಎಸ್ ರಾಜ್ಯ ನಾಯಕ ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ಖಾಸಿಂ ಪದ್ಮುಂಜ, ಎಸ್ಎಸ್ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್ ಡಿ ಎಂ ಸಿ ಸದಸ್ಯರೂ ಆದ ಕಲಂದರ್ ಪದ್ಮುಂಜ, ಎಸ್ಎಸ್ಎಫ್ ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷ ಫಾರೂಕ್ ಸಅದಿ ಮಲೆಂಗಲ್ಲು, ಎಸ್ಎಸ್ಎಫ್ ಉಪ್ಪಿನಂಗಡಿ ಡಿವಿಷನ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮಲೆಂಗಲ್ಲು, ಎಸ್ ಡಿ ಎಂ ಸಿ ಅಧ್ಯಕ್ಷ ಯುವರಾಜ ಇಂದ್ರ, ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ್, ಕಣಿಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನೀಲ್ ಸಾಲ್ಯಾನ್ ಉಪಸ್ಥಿತರಿದ್ದರು.