janadhvani

Kannada Online News Paper

ಮನ್-ಶರ್ ಗ್ರೂಪ್ ಅಧೀನದಲ್ಲಿ “ಪ್ಯಾರಾಮೆಡಿಕಲ್ ಕಾಲೇಜ್” ಲೋಕಾರ್ಪಣೆ

ಬೆಳ್ತಂಗಡಿ:ಮನ್-ಶರ್ ಸಂಸ್ಥೆಯು ಪ್ರಸ್ತುತ ವರ್ಷದಿಂದ ಆರಂಭಿಸಲಿರುವ ಮನ್-ಶರ್ ಪ್ಯಾರಾಮೆಡಿಕಲ್ ಕಾಲೇಜ್ ಇದರ ಉಧ್ಘಾಟನಾ ಸಮಾರಂಭವು ಬೆಳ್ತಂಗಡಿಯಲ್ಲಿ ಸಂಸ್ಥೆಯ ಚೆಯರ್ಮ್ಯಾನ್ ಸಯ್ಯದ್ ಉಮರ್ ಅಸ್ಸಖಾಫ್ ಅವರ ನೇತೃತ್ವದಲ್ಲಿ ನಡೆಯ್ತು.ಸ್ಥಳೀಯ ಶಾಸಕ ಹರೀಶ್ ಪೂಂಜಾರವರು ಹಲವು ಗಣ್ಯರ ಉಪಸ್ಥಿತಿಯಲ್ಲಿ ಕಾಲೇಜನ್ನು ಲೋಕಾರ್ಪಣೆ ಗೈದರು.ಉಧ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕರು ಮನ್-ಶರ್ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಮನ್-ಶರ್ ಗ್ರೂಪ್ ಅಧ್ಯಕ್ಷರಾದ ಸಯ್ಯದ್ ಉಮರ್ ಅಸ್ಸಖಾಫ್ ಮಾತನಾಡಿ ಮನ್-ಶರ್ ಸಂಸ್ಥೆ ಸಮಾಜಕ್ಕೆ ಸೌಹಾರ್ಧತೆಯ ಸಂದೇಶವನ್ನು ನೀಡುವ ಸಂಸ್ಥೆಯಾಗಿದ್ದು ಎಲ್ಲಾ ಧರ್ಮದ ನಾಯಕರು,ಮುಖಂಡರು,ರಾಜಕೀಯ ಪಕ್ಷಗಳ ನಾಯಕರು ನಮ್ಮ ಬೆಳವಣಿಗೆಯಲ್ಲಿ ಸಹಾಯ ಸಹಕಾರ ನೀಡಿದ್ದು ಅವರೆಲ್ಲರ ಹಾರೈಕೆಯೊಂದಿಗೆ ಸಂಸ್ಥೆ ಇಂದು ಕರ್ನಾಟಕದಾದ್ಯಂತ ಬೆಳೆದು ಬರಲು ಸಾಧ್ಯವಾಗಿದ್ದು ಮನ್-ಶರ್ ಗ್ರೂಪ್ ಕೇವಲ ಶಿಕ್ಷಣಕ್ಕೆ ಸೀಮಿತವಲ್ಲದೆ ಜೀವನ ಮೌಲ್ಯವನ್ನು ಕಲಿಸಿ ಸಮಾಜಕ್ಕೆ ಅರ್ಪಿಸುವ ಬಲುದೊಡ್ಡ ಗುರಿಯನ್ನು ಹೊಂದಿದೆ ಎಂಬ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪುತ್ತೂರು ಚೀಫ್ ಮೆಡಿಕಲ್ ಆಫೀಸರ್ ಡಾ.ರಘು ಮನ್-ಶರ್ ಪ್ಯಾರಾಮೆಡಿಕಲ್ ಕಾಲೇಜ್ ಬೆಳ್ತಂಗಡಿಯ ಅನಿವಾರ್ಯ ಸಂಸ್ಥೆಯಾಗಿದ್ದು ಜೊತೆಗೆ ಮನ್-ಶರ್ ಸಂಸ್ಥೆ ತೊಡಗಿಸಿಕೊಂಡಿರುವ ಸಾಮಾಜಿಕ,ಶೈಕ್ಷಣಿಕ ಕ್ರಾಂತಿಯು ಸಮಾಜಕ್ಕೆ ಮಾದರಿಯಾಗಿದ್ದು ಸಂಸ್ಥೆಯ ಅಧ್ಯಕ್ಷರ ವಿನಯತೆ ಮತ್ತು ಛಲ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಧಾನವಾಗಿ ಕಾಣುತ್ತಿದ್ದು ನಮ್ಮ ಎಲ್ಲಾ ಸಹಾಯ,ಸಹಕಾರ ನಿರಂತರವಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮತ್ತೊರ್ವ ಗಣ್ಯ ಅತಿಥಿಯಾಗಿ ಭಾಗವಹಿಸಿದ ಬೆಳ್ತಂಗಡಿ ಅಭಯ ಆಸ್ಪತ್ರೆ ಮ್ಯಾನೇಜಿಂಗ್ ಡೈರಕ್ಟರ್ ಡಾ.ಶ್ರೀ ಹರಿ ಮನ್-ಶರ್ ಸಂಸ್ಥೆ ಬೆಳ್ತಂಗಡಿಯ ಅಭಿಮಾನ ಸಂಸ್ಥೆಯಾಗಿ ಮೂಡಿಬರಲಿ ಎಂದು ಶುಭಹಾರೈಸಿದರು.

ಮನ್-ಶರ್ ಗ್ರೂಪ್ ಎಜು-ವಿಲೇಜ್ ಮ್ಯಾನೇಜಿಂಗ್ ಡೈರಕ್ಟರ್ ಹಾಗೂ ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಶೇಖ್ ಬಾವಾ ಹಾಜಿ ಮಂಗಳೂರು ಮಾತನಾಡಿ ಮನ್-ಶರ್ ಭವಿಷ್ಯದಲ್ಲಿ ಉದ್ದೇಶಿತ ಹೆಜ್ಜೆಗಳ ಕುರಿತು ಮಾಹಿತಿ ನೀಡಿ ಪ್ರತಿಯೊಬ್ಬರು ಸಂಸ್ಥೆಯ ಹೆಜ್ಜೆಗಳಿಗೆ ಸಹಕರಿಸುವಂತೆ ಸಂದೇಶ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮನ್-ಶರ್ ಗ್ರೂಪ್ ಪ್ರಧಾನ ಕಾರ್ಯದರ್ಶಿ ಎಮ್.ಬಿ.ಎಮ್ ಸ್ವಾಧಿಕ್ ಮಲೆಬೆಟ್ಟು ಮಾತನಾಡಿ ಮನ್-ಶರ್ ಗ್ರೂಪ್ ಸುಮಾರು 9ವಿವಿಧ ಸಂಸ್ಥೆಗಳಲ್ಲಿ 1500 ವಿಧ್ಯಾರ್ಥಿಗಳನ್ನು ಹಾಗೂ 150 ಸಿಬ್ಬಂದಿಗಳನ್ನು ಒಳಗೊಂಡ ಬ್ರಹತ್ತಾದ ಸಂಸ್ಥೆಯಾಗಿದ್ದು ಶೀಘ್ರವಾಗಿ ಬೆಳೆಯುತ್ತಿರುವ ಸಂಸ್ಥೆಯ ಆಗುಹೋಗುಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಕೈಗಾರಿಕೋಧ್ಯಮಿ ರಮಾನಂದ ಸಾಲ್ಯಾನ್ ಕೆ ,ಉಡುಪಿ ಎಚ್.ಪಿ.ಆರ್ ಗ್ರೂಪ್ ಅಧ್ಯಕ್ಷರಾದ ಡಾ.ಹರಿಪ್ರಸಾದ್ ರೈ, ಮನ್-ಶರ್ ಗ್ರೂಪ್ ಡೈರಕ್ಟರ್ ಸಯ್ಯದ್ ಆಬಿದ್ ಅಸ್ಸಖಾಫ್, ಪ್ಯಾರಾಮೆಡಿಕಲ್ ಪ್ರಿನ್ಸಿಪಾಲ್ ಹೈದರ್ ಮರ್ದಾಲ,ಮನ್-ಶರ್ ಸಾರ್ವಜನಿಕ ಸಂಪರ್ಕಾಧಿಕಾರಿ ಖಲಂದರ್ ಪದ್ಮುಂಜ,ಮನ್-ಶರ್ ಸಿದ್ರಾ ಮ್ಯಾನೇಜರ್ ಅಬ್ದುಲ್ ಸಖಾಫಿ ನಿಂತಿಕಲ್, ನ್ಯೂಬಿ ಕೋರ್ಡಿನೇಟರ್ ನೌಫಲ್ ಕಕ್ಕಿಂಜೆ,ಮನ್-ಶರ್ ಸ್ಕೂಲ್ ಕ್ಯಾಂಪಸ್ ಉಸ್ತುವಾರಿ ರಶೀದ್ ಕುಪ್ಪೆಟ್ಟಿ ಸಹಿತ ಹಲವಾರು ಗಣ್ಯರು ಭಾಗವಹಿಸಿದರು.

ಮನ್-ಶರ್ ಅಕಾಡೆಮಿಕ್ ಡೈರಕ್ಟರ್ ವಸಂತ ಕುಮಾರ್ ನಿಟ್ಟೆ ಗಣ್ಯ ಅತಿಥಿಗಳನ್ನು ಸ್ವಾಗತಿಸಿ ವಂಧಿಸಿದರು.ಮನ್-ಶರ್ ಸಿಧ್ರಾ ವಿಧ್ಯಾರ್ಥಿ ಅಬ್ದುಲ್ ರಹಿಮಾನ್ ಶಫೀಹ್ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !! Not allowed copy content from janadhvani.com