janadhvani

Kannada Online News Paper

ರಿಯಾದ್: ಕಾನೂನು ಉಲ್ಲಂಘನೆ- ಹಲವಾರು ವಿದೇಶೀಯರ ಬಂಧನ

ರಿಯಾದ್: ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳಲ್ಲಿ ಕಾರ್ಮಿಕ ಸಚಿವಾಲಯ ನಡೆಸಿದ ತಪಾಸಣೆಯಲ್ಲಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಹಲವಾರು ವಿದೇಶೀಯರನ್ನು ಬಂಧಿಸಲಾಗಿದೆ. ಮಹಿಳಾ ಅಂಗಡಿಗಳಲ್ಲಿಯೂ ತಪಾಸಣೆ ನಡೆಸಲಾಗಿದೆ.

ಕಾರ್ಮಿಕ ಸಚಿವಾಲಯವು ರಿಯಾದ್ ಮತ್ತು ದಮ್ಮಾಮ್‌ನಲ್ಲಿ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದೆ.

ತನ್ನ ಮಾಲೀಕರನ್ನು ಹೊರತಾಗಿ ಕೆಲಸ ಮಾಡಿದ 13 ವಿದೇಶೀಯರನ್ನು ಖತೀಫ್ ಬಾಬ್ ಅಲ್-ಶಿಮಾಲ್‌ನಲ್ಲಿ ಬಂಧಿಸಲಾಯಿತು.

ಖತೀಫ್ ಕಾರ್ಮಿಕಾಧಿಕಾರಿ ಅಬ್ದುಲ್ ಕರೀಮ್ ಆಲುತ್ವಾಹ ಅವರು ಸಣ್ಣ ಉದ್ಯಮಗಳು ಮತ್ತು ಬೀದಿಯಲ್ಲಿ ವ್ಯಾಪಾರ ಮಾಡುವವರು ಬಂಧಿತರಾಗಿದ್ದಾರೆ ಎಂದು ಹೇಳಿದರು.ಬಂಧಿತರು ಪೊಲೀಸ್ ಕಸ್ಟಡಿಯಲ್ಲಿದ್ದು, ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಅವರನ್ನು ಗಡೀಪಾರು ಮಾಡಲಾಗುವುದು ಎಂದು ಕಾರ್ಮಿಕಾಧಿಕಾರಿ ತಿಳಿಸಿದ್ದಾರೆ.

ರಿಯಾದ್ನಲ್ಲಿನ ಶಾಪಿಂಗ್ ಮಾಲ್ನಲ್ಲಿ ಮಹಿಳೆಯರಿಗೆ ಸೀಮಿತಗೊಳಿಸಲಾದ ಸಂಸ್ಥೆಗಳಲ್ಲಿ ಕೂಡ ತಪಾಸಣೆ ನಡೆಯಿತು.ಕಾರ್ಮಿಕ ಸಚಿವಾಲಯದಲ್ಲಿನ ಮಹಿಳಾ ಅಧಿಕಾರಿಗಳ ನಾಯಕತ್ವದಲ್ಲಿ 82 ಮಹಿಳಾ ಅಂಗಡಿಗಳಲ್ಲಿ ಈ ತಪಾಸಣೆಯನ್ನು ನಡೆಸಲಾಯಿತು.

ಕಾರ್ಮಿಕ ಸಚಿವಾಲಯದ ಪ್ರಕಾರ, 32 ಉಲ್ಲಂಘನೆಗಳನ್ನು ದಾಖಲಿಸಲಾಗಿದೆ. ಸ್ಥಳೀಯ ಮಹಿಳೆಯರಿಗೆ ಬದಲಾಗಿ ಪುರುಷರಿಂದ ಕೆಲಸ ಮಾಡಿಸಿದರೆ ಸ್ಥಾಪನೆಗೆ ದಂಡ ವಿಧಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com