janadhvani

Kannada Online News Paper

ಕುವೈಟ್: ಸಂದರ್ಶನ ವೀಸಾ ಹೆಂಡತಿ ಮಕ್ಕಳಿಗೆ ಮಾತ್ರ ಸೀಮಿತ

ಕುವೈಟ್ ಸಿಟಿ: ಕುಟುಂಬ ಭೇಟಿ ವಿಸಾವನ್ನು ಹೆಂಡತಿ ಮಕ್ಕಳಿಗೆ ಮಾತ್ರ ಸೀಮಿತಗೊಳಿಸಲು ಸರ್ಕಾರ ಯೋಚಿಸಿದೆ.
ದೇಶದಲ್ಲಿ ಪ್ರಸ್ತುತ ಸ್ವದೇಶಿ-ವಿದೇಶಿ ಜನಸಂಖ್ಯಾ ಸ್ಥಿತಿಯಲ್ಲಿನ ಅಸಮತೋಲನವನ್ನು ಪರಿಹರಿಸಲು ಸರಕಾರ ಹೆಚ್ಚಿನ ನಿಯಂತ್ರಣ ಏರ್ಪಡಿಸಲು ಮುಂದಾಗಿದೆ.

ದೇಶದಲ್ಲಿ ಉದ್ಯೋಗ ಮಾರುಕಟ್ಟೆ ಕ್ರಮೀಕರಣ ಮತ್ತು ಜನಸಂಖ್ಯಾ ಅಸಮತೋಲನವನ್ನು ಪರಿಹರಿಸುವ ಭಾಗವಾಗಿ ಜಾರಿಗೆ ತರಲು ಉದ್ದೇಶಿಸಲಾದ ಪದ್ದತಿಯ ಅನುಸಾರ ಕುಟುಂಬ ಪ್ರವಾಸ ವೀಸಾವನ್ನು ನಿಯಂತ್ರಿಸಲು ಕುವೈಟಿನ ಗೃಹ ಮಂತ್ರಾಲಯ, ಸಾಮಾಜಿಕ ವ್ಯವಹಾರ ಮಂತ್ರಾಲಯ, ವಾಣಿಜ್ಯ ಉದ್ಯಮ ಮಂತ್ರಾಲಯಗಳು ಸಂಯುಕ್ತವಾಗಿ ಕ್ರಮಗಳಿಗೆ ಮುಂದಾಗಿದೆ.

ಪ್ರಸ್ತುತ 32 ಲಕ್ಷ ವಿದೇಶಿಯರು ಮತ್ತು 14 ಲಕ್ಷ ಸ್ವದೇಶಿ ಜನರು ಕುವೈತ್ ನಲ್ಲಿ ವಾಸಿಸುತ್ತಿದ್ದಾರೆ. ಅಂದರೆ 70% ವಿದೇಶಿಯರು ಮತ್ತು 30% ಸ್ವದೇಶಿಗಳು ವಾಸವಿದ್ದಾರೆ ಎಂಬುದಾಗಿ ಪಬ್ಲಿಕ್ ಅಥಾರಿಟಿ ಫಾರ್ ಸಿವಿಲ್ ಇನ್ಫರ್ಮೇಶನ್ ನ ಇತ್ತೀಚಿನ ಅಂಕಿಯಾಂಶಗಳು ಬಹಿರಂಗಪಡಿಸುತ್ತಿವೆ.

ಪ್ರಸ್ತುತ ಕುಟುಂಬ ಪ್ರವಾಸ ವೀಸಾದಲ್ಲಿ ಅನುಮತಿಸಿರುವಂತೆ ಹೆತ್ತವರು ಸಮೇತ ಹತ್ತಿರದ ಸಂಬಂಧಿಕರನ್ನು ಕರೆ ತರಲು ಅನುಮತಿಸಲಾಗಿತ್ತು ,ಅಲ್ಲದೇ ವಿಸಾ ಕಾಲಾವಧಿಯನ್ನು ವಿಸ್ತರಿಸಲು ಅನುಮತಿ ಇತ್ತು.

ಆದರೆ ಇದೀಗ ಕಠಿಣ ನಿಯಂತ್ರಣಗಳನ್ನು ಏರ್ಪಡಿಸಲು ಸರ್ಕಾರ ಯೋಚಿಸುತ್ತಿದೆ. ಜನಸಂಖ್ಯಾ ಅಸಮತೋಲನವನ್ನು ಎದುರಿಸುವ ಭಾಗವಾಗಿ ಕಠಿಣವಾದ ಕ್ರಮಗಳನ್ನು ಶೀಘ್ರದಲ್ಲೇ ಘೋಷಿಸಲಿದ್ದೇವೆ ಎಂದು ಕಾರ್ಮಿಕ ಸಾಮಾಜಿಕ ಸಚಿವ ಹಿಂದ್ ಅಲ್ ಸುಬೀಹ್ ಘೋಷಿಸಿದ್ದಾರೆ.

error: Content is protected !! Not allowed copy content from janadhvani.com