janadhvani

Kannada Online News Paper

ಅಲ್ ಮದೀನ ಮಂಜನಾಡಿ: ಕೊಡಗಿಗೆ ಸಾಂತ್ವನ

ಅಲ್ ಮದೀನ ಸಿಲ್ವರ್ ಜ್ಯೂಬಿಲಿ 2019 ಫೆಬ್ರವರಿ 1,2,3 ಇದರ ಪ್ರಯುಕ್ತ ಅಲ್ ಮದೀನ ದ‌ಅವಾ ವಿದ್ಯಾರ್ಥಿಗಳ ಬಿಶಾರತುಲ್ ಮದೀನ ವಿದ್ಯಾರ್ಥಿ ಒಕ್ಕೂಟದ 25 ಪದ್ದತಿಗಳಲ್ಲೊಂದಾದ ವಸ್ತ್ರ ಸಂಗ್ರಹಣೆ ಮತ್ತು ವಿತರಣೆ ಕಾರ್ಯವನ್ನು ನಡೆಸಲಾಯ್ತು.ಕೊಡಗಿನ ನೆರೆ ಸಂತ್ರಸ್ಥರಾದವರಿಗೆ ಸಂತೈಸಲು ಸಮಸ್ತ ಮುಶಾವರ ಸದಸ್ಯರೂ ಕರುನಾಡಿನ ಮರ್ಕಝ್ ಅಲ್ ಮದೀನಾ ಮಂಜನಾಡಿ ಸಂಸ್ಥೆಯ ಸಾರಥಿ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಆಶಿರ್ವಾದದೊಂದಿಗೆ ಅಲ್ ಮದೀನ ದ‌ಅವಾ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾದಾಗ
ಉಳ್ಳಾಲ,ಕೆ.ಸಿ ರೋಡ್, ಬೆಳ್ತಂಗಡಿ ಪರಪ್ಪು, ಸಾಲೆತ್ತೂರು, ತೌಡುಗೋಳಿ, ಮಲಾರ್, ಮುಡಿಪು ಇನ್ನಿತರ ಹಲವಾರು ಊರಿನ ಜನರು ಬಟ್ಟೆಬರೆಗಳನ್ನು ಸಂಗ್ರಹಿಸಿ ಅಲ್ ಮದೀನಕ್ಕೆ ತಲುಪಿಸಿದ್ದರು.ಅಬೂಬಕ್ಕರ್ ಮರ್ಝೂಖಿ ಸಖಾಫಿ ಗೇರುಕಟ್ಟೆ, ಬಿಶಾರತುಲ್ ಮದೀನದ ಅಧ್ಯಕ್ಷ ಅನೀಸ್ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಶೆರೀಫ್ ವಲಾಲ್, ಕನ್ವೀನರ್ ನೌಫಲ್ ಮಲಾರ್ ರವರು ಸಾಮಾಗ್ರಿಗಳೊಂದಿಗೆ ಕೊಡಗಿನ ಸಂತ್ರಸ್ತರನ್ನು ಭೇಟಿ ನೀಡಿದರು. ಅಲ್ಲಿನ ಯುವಕರು ಅದನ್ನು ಸ್ವೀಕರಿಸಿ ವಿತರಿಸುವ ಕಾರ್ಯವನ್ನು ಕೈಗೊಂಡರು.

error: Content is protected !! Not allowed copy content from janadhvani.com