janadhvani

Kannada Online News Paper

ಅ.11(ಇಂದು)ಉಪ್ಪಿನಂಗಡಿಯಲ್ಲಿ ಉಳ್’ಹಿಯ್ಯತ್ ಅಧ್ಯಯನ ತರಗತಿ- KSOCR ನಲ್ಲಿ ನೇರ ಪ್ರಸಾರ

ಉಪ್ಪಿನಂಗಡಿ: ಎಸ್.ವೈ.ಎಸ್.ಉಪ್ಪಿನಂಗಡಿ ಸೆಂಟರ್ ವತಿಯಿಂದ ಉಳ್’ಹಿಯ್ಯತ್ ಕುರಿತು ಅಧ್ಯಯನ ತರಗತಿ ಆಗಸ್ಟ್-11 ಶನಿವಾರ ಬೆಳಿಗ್ಗೆ10ಕ್ಕೆ ಉಪ್ಪಿನಂಗಡಿ ಎಂ.ಎಚ್.ಕಂಪೌಂಡ್ ನಲ್ಲಿ ನಡೆಯಲಿಕ್ಕಿದೆ.

ಬಹಳ ಮಹತ್ವವಿರುವ ಉಳ್’ಹಿಯ್ಯತ್ ಕುರಿತಾದ ಜನಸಾಮಾನ್ಯರಿಗೆ ಇರುವ ಸಂಶಯ ನಿವಾರಣೆ, ದ್ಸಬಹ್ ಮಾಡ ಬೇಕಾದವರು ಯಾರು?ಉಳ್’ಹಿಯ್ಯತ್ ಯಾರಿಗೆ ಕಡ್ಡಾಯ? ಮೃಗ ಯಾವುದಾಗಿರಬೇಕು? ಎಷ್ಟು ವಯಸ್ಸಾಗಿರ ಬೇಕು?ಹೀಗೆ ಉಳ್’ಹಿಯ್ಯತ್ ಕುರಿತು ಎಲ್ಲಾ ಮುಸ್ಲಿಮರು ಕಡ್ಡಾಯವಾಗಿ ತಿಳಿದಿರಬೇಕಾದ ಹಲವು ವಿಚಾರಗಳನ್ನು ಖ್ಯಾತ ಕರ್ಮ ಶಾಸ್ತ್ರ ಪಂಡಿತರೂ,ವಾಗ್ಮಿಯೂ ಆದಂತಹಾ ಮೌಲಾನ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತರಗತಿ ಮಂಡಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸುನ್ನೀ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ವಿಜಯಗೊಳಿಸ ಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಪ್ರಸ್ತುತ ಕಾರ್ಯಕ್ರಮ KSOCR ನಲ್ಲಿ ನೇರ ಪ್ರಸಾರ ಗೊಳ್ಳಲಿದೆ.

error: Content is protected !! Not allowed copy content from janadhvani.com