janadhvani

Kannada Online News Paper

ಯುಎಇ ಪ್ರಯಾಣ ನಿಷೇಧವನ್ನು ತೆರವುಗೊಳಿಸಲು ಕ್ಷಮಾಪಣೆ ವೇಳೆಯಲ್ಲಿ ಅವಕಾಶ

ದುಬೈ: ಈ ಹಿಂದೆ ಯುಎಇ ಪ್ರಯಾಣಕ್ಕೆ ನಿಷೇಧವಿರುವ ಅನಿವಾಸಿಗಳಿಗೂ ಪ್ರಸ್ತುತ ಸಾರ್ವಜನಿಕ ಕ್ಷಮಾಪಣೆಯಲ್ಲಿ ನಿಷೇಧವನ್ನು ತೆರವುಗೊಳಿಸಲು ಅವಕಾಶ ನೀಡಲಾಗಿದೆ.

ಕ್ಷಮಾಪಣೆಯ ಮೂರು ತಿಂಗಳ ಅವಧಿಯಲ್ಲಿ ನಿಷೇಧವನ್ನು ತೆಗೆದುಹಾಕಲು ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ವೀಸಾದಲ್ಲಿ ಇದ್ದವರಿಗೆ ಈ ಪ್ರಯೋಜನವನ್ನು ಪಡೆಯ ಬಹುದಾಗಿದೆ.

ಆದರೆ ಇಲ್ಲಿ ಪೊಲೀಸ್ ಪ್ರಕರಣಗಳನ್ನು ಹೊಂದಿರುವವರು ಈ ಪ್ರಯೋಜನ ಪಡೆಯುವಂತಿಲ್ಲ.
ಕಾಲಾವಧಿ ಮುಗಿದು ಬಾಕಿ ಉಳಿದವರು ಮತ್ತು ಮಾಲೀಕರಿಂದ ತಪ್ಪಿಸಿ ಪರಾರಿಯಾದವರು ಈ ಪ್ರಯೋಜನ ಪಡೆಯಬಹುದು.

ಆದಾಗ್ಯೂ, ಪ್ರಕರಣದ ವೈಯಕ್ತಿಕ ಪರಿಶೀಲನೆಯ ನಂತರ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಅಗತ್ಯವಿದ್ದವರು ಯುಎಇ ಯಲ್ಲಿರುವ ಯಾರದೇ ಮುಖಾಂತರ ಈ ವಿಷಯದಲ್ಲಿ ಅರ್ಜಿಯನ್ನು ಸಲ್ಲಿಸ ಬಹುದಾಗಿದೆ.

error: Content is protected !! Not allowed copy content from janadhvani.com