janadhvani

Kannada Online News Paper

ರಿಯಾದ್: ಸೌದಿ ಅರೇಬಿಯಾ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಬಿರುಕುಂಟಾಗಿದೆ.
ಸೌದಿ ಅರೇಬಿಯವು ಕೆನಡಿಯನ್ ಅಂಬಾಸಿಡರ್‌ಗೆ 24 ಗಂಟೆಗಳೊಳಗೆ ದೇಶ ತೊರೆಯುವಂತೆ ಆದೇಶ ನೀಡಿದೆ. ಅದೇ ರೀತಿ ಎರಡು ದೇಶಗಳ ನಡುವಿನ ಎಲ್ಲಾ ಹೊಸ ವ್ಯಾಪಾರ ಸಂಬಂಧಗಳನ್ನು ಕೂಡ ಸ್ಥಗಿತಗೊಳಿಸಿವೆ. ತಮ್ಮ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಸೌದಿಯು ಈ ಕ್ರಮ ಕೈಗೊಂಡಿದೆ.

ಕೆನಡಾದ ಸೌದಿ ರಾಯಭಾರಿಯನ್ನು ಹಿಂದಕ್ಕೆ ಕರೆಯಲಾಗಿದೆ ಎಂದು ಸೌದಿ ತಿಳಿಸಿದೆ.
ಸೌದಿ ಅರೇಬಿಯಾದ ಜೈಲುಗಳಲ್ಲಿರುವ ಮಾನವ ಹಕ್ಕು ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಕೆನಡಾ ರಾಯಭಾರವು ಸೌದಿಯನ್ನು ಒತ್ತಾಯಿಸಿತ್ತು. ಕೆನಡಾದ ವಿದೇಶಾಂಗ ಸಚಿವಾಲಯ ಕೂಡ ಇದನ್ನು ಪುನರಾವರ್ತಿಸಿದ್ದು, ಸೌದಿ ಅರೇಬಿಯಾವನ್ನು ಕೆರಳಿಸಿದೆ.

ಸರಕಾರದ ವಿರುದ್ದ ಹೋರಾಟಕ್ಕಿಳಿದ ಕಾರಣ ಮಹಿಳಾ ಹಕ್ಕುಗಳ ಕಾರ್ಯಕರ್ತ ಸಮರ್ ಬದಾವಿ, ನಸೀಮಾ ಅಲ್-ಸದಾರನ್ನು ಕಳೆದ ವಾರ ಬಂಧಿಸಲಾಗಿತ್ತು

error: Content is protected !! Not allowed copy content from janadhvani.com