janadhvani

Kannada Online News Paper

ಹಜ್-2018: ಪವಿತ್ರ ಕಅಬಾ ಶರೀಫಿನ ‘ಕಿಸ್ವಾ’ ಎತ್ತಿ ಕಟ್ಟಲಾಯ್ತು

ಮಕ್ಕಾ: ಹಜ್ ಮತ್ತು ಉಮ್ರಾ ಸಚಿವಾಲಯದ ನೇತೃತ್ವದಲ್ಲಿ ಪವಿತ್ರ ಕ‌ಅಬಾಲಯದ ಕಿಸ್ವಾ ಅನ್ನು ಎತ್ತಿ ಕಟ್ಟಲಾಯಿತು.
ಹಜ್ ಸಮಯದಲ್ಲಿ ಭಾರಿ ಜನಸಂದಣಿಯಿಂದ ಕಿಸ್ವಾಗೆ ಹಾನಿಯುಂಟಾಗುವುದನ್ನು ತಡೆಗಟ್ಟಲು ಕಿಶ್ವಾ ವನ್ನು ಪ್ರತಿ ವರ್ಷವೂ ಎತ್ತಿ ಕಟ್ಟಲಾಗುತ್ತದೆ.

ಪ್ರತೀ ವರ್ಷ ಅರಫಾ ದಿನದಂದು ಹೊಸ ಕಿಸ್ವಾ ಅನ್ನು ಕ‌ಅಬಾಲಯಕ್ಕೆ ಹೊಂದಿಸಲಾಗುತ್ತದೆ. ಹೊಸ ಕಿಸ್ವಾ ಹೊದಿಸಿದ ನಂತರ, ಮತ್ತೆ ಅದನ್ನು ಎತ್ತಿ ಕಟ್ಟಲಾಗುತ್ತದೆ. ಹಜ್ ಸಮಾಪ್ತಿಯ ನಂತರ ಮತ್ತೆ ಪೂರ್ವ ಸ್ಥಿತಿಗೆ ಇಳಿಸಲಾಗುತ್ತದೆ.

ಕ‌ಅಬಾದ ತಳಭಾಗಕ್ಕಿಂತ ಮೂರು ಮೀಟರ್ ಮೇಲೆ ನಾಲ್ಕು ಭಾಗಗಳಲ್ಲೂ ಎತ್ತಿ ಕಟ್ಟಲಾಗಿದೆ. ಎತ್ತಿಕಟ್ಟಿದ ಭಾಗವನ್ನು ಎರಡು ಮೀಟರ್ ಅಗಲದಲ್ಲಿ ಬಿಳಿಯ ರೇಷ್ಮೆ ಬಟ್ಟೆಯಿಂದ  ಮರೆಮಾಡಲಾಗಿದೆ.

error: Content is protected !! Not allowed copy content from janadhvani.com