ತಿರುವನಂತಪುರಂ: ಯು.ಎ.ಇ.ಯಲ್ಲಿ ಸಾರ್ವಜನಿಕ ಕ್ಷಮಾಪಣೆಯ ಲಾಭ ಗಳಿಸಿದವರನ್ನು ಊರಿಗೆ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ನೋರ್ಕ ಟೂರ್ಸ್ ಮೂಲಕ ವ್ಯವಸ್ಥೆ ಮಾಡಲಾಗುವುದು. ಆಗಸ್ಟ್ ಒಂದರಿಂದ ಕ್ಷಮಾಪಣೆಗೆ ಅರ್ಜಿ ಸಲ್ಲಿಸಬಹುದು ಅಕ್ಟೋಬರ್ 31ರ ವರೆಗೆ ಕ್ಷಮಾಪಣೆ ಜಾರಿಯಲ್ಲಿರುತ್ತದೆ.
ಯುಎಇಯ ಒಂಬತ್ತು ಕೇಂದ್ರಗಳ ಮೂಲಕ ಸಾರ್ವಜನಿಕ ಕ್ಷಮಾಪಣೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ ಮಧ್ಯದಲ್ಲಿ ಪ್ರಥಮ ತಂಡ ಊರಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಕ್ಷಮಾಪಣೆ ಲಭಿಸುವವರ ಮಾಹಿತ ಕಲೆಹಾಕುವ ಕೆಲಸ ಪ್ರಾರಂಭಿಸಲಾಗಿದ್ದು, ಸರಕಾರದ ಶ್ರಮಗಳಿಗೆ ಸಹಕರಿಸಲು ಯುಎಇಯ ಅನಿವಾಸಿಗಳೊಂದಿಗೆ ಮುಖ್ಯಮಂತ್ರಿ ವಿನಂತಿಸಿದ್ದಾರೆ.