ಅಬುಧಾಬಿ: ಸಾರ್ವಜನಿಕ ಕ್ಷಮಾಪಣೆಗೆ ಅಪೇಕ್ಷೆ ಸಲ್ಲಿಸಲು ಭಾರತೀಯರಿಗೆ ಅರ್ಜಿ ಫಾರಂ ನ್ನು ಅಧಿಕಾರಿಗಳು ಪ್ರಕಟಿಸಿದ್ದಾರೆ. ಮೂರು ಪುಟಗಳಿರುವ ಅರ್ಜಿಯನ್ನು ಸ್ವತಹ ಅಥವಾ ಇತರರಿಂದ ತುಂಬಿಸಬೇಕು.
ಹೆಚ್ಚುವರಿಯಾಗಿ, 51×51 ಎಂಎಂ ಇರುವ ಫೋಟೊವನ್ನು ಅಪ್ಲಿಕೇಶನ್‌ನಲ್ಲಿ ಲಗತ್ತಿಸಬೇಕು. ಇಂಗ್ಲೀಷ್ ನ ದೊಡ್ಡ ಅಕ್ಷರಗಳಲ್ಲಿ ಭರ್ತಿ ಮಾಡಿ, ಜೊತೆಗೆ, ಅಫಿಡವಿಟ್ ಸಹ ಸಲ್ಲಿಸಬೇಕು.
ಅಪೇಕ್ಷಾ ಫಾರಂ ವಿವಿಧ ಸಂಸ್ಥೆಗಳ ಸಹಾಯ ಕೇಂದ್ರಗಳಲ್ಲಿಯೂ ಲಭ್ಯವಿದೆ. ಭರ್ತಿಮಾಡಲು ಗೊತ್ತಿಲ್ಲದವರಿಗೆ ಸಹಾಯ ಮಾಡಲು ಸ್ವಯಂಸೇವಕರು ಲಭ್ಯವಿರುತ್ತಾರೆ.
ಅಗತ್ಯವಿರುವ ಮಾಹಿತಿ
- ಪೂರ್ಣ ಹೆಸರು.
- ಬೇರೆ ಹೆಸರುಗಳು ಇದ್ದಲ್ಲಿ ಅದನ್ನೂ ಸೇರಿಸಿ,
- ಮಹಿಳೆ ಅಥವಾ ಪುರುಷನೇ ?
- ವಿಧವೆ /ವಿಚ್ಛೇದಿತೆ
- ತಂದೆ /ಗಂಡನ ಹೆಸರು.
- ತಾಯಿಯ ಹೆಸರು.
- ಹುಟ್ಟಿದ ದಿನಾಂಕ
- ಹುಟ್ಟಿದ ಸ್ಥಳ
- ಗ್ರಾಮ/ ನಗರ
- ಜಿಲ್ಲೆ
- ರಾಜ್ಯ
- ಭಾರತದಲ್ಲಿನ ಸ್ಥಿರ ವಿಳಾಸ
- ಯುಎಇನಲ್ಲಿ ವಿಳಾಸ
- ಪೋಸ್ಟ್ ಬಾಕ್ಸ್ ಸಂಖ್ಯೆ
- ಟೆಲಿಫೋನ್
- ಎಮಿರೇಟ್
- ಕೆಲಸ
ಪಾಸ್ಪೋರ್ಟ್ ಮಾಹಿತಿ
- ಪಾಸ್ಪೋರ್ಟ್ ಸಂಖ್ಯೆ
- ಅನುಮೋದಿತ ದಿನಾಂಕ
- ಅನುಮತಿಸಲಾದ ಸ್ಥಳ
- ಇಸಿಎನ್ಆರ್ / ಇಸಿಆರ್
- ಪಾಸ್ಪೋರ್ಟ್ ಮಾಹಿತಿ ಇಲ್ಲದಿದ್ದರೆ, ಕಾರಣವನ್ನು ತಿಳಿಸಿ.
- ಗುರುತಿಸಲು ದೇಹದಲ್ಲಿರುವ ಗುರುತು.
- ಎತ್ತರ
ಪುಟ 2 – ಯುಎಇಗೆ ಆಗಮಿಸಿದ ಮಾಹಿತಿ
- ಆಗಮಿಸಿದ ದಿನ
- ವಿಮಾನದಲ್ಲಿ ಅಥವಾ ಹಡಗಿನಲ್ಲಿ ?
- ಯುಎಇಗೆ ಬಂದಿಳಿದ ಸ್ಥಳ
- ಎಲ್ಲಿಂದ ಬಂದಿರುವಿರಿ?
- ಯುಎಇನಲ್ಲಿ ಪ್ರಾಯೋಜಕರ ಹೆಸರು ಮತ್ತು ಇತರ ವಿವರಗಳು
- ಭಾರತದಲ್ಲಿ ಏಜೆಂಟ್ ಹೊಂದಿದ್ದರೆ ಅವರ ಮಾಹಿತಿ,
- ಯುಎಇಯಲ್ಲಿ ಸಂಬಂಧಿಕರು ಅಥವಾ ಸ್ನೇಹಿತರು ಇದ್ದರೆ, ಅವರ ಹೆಸರು, ಸಂಪರ್ಕ, ವಿಳಾಸ, ಪಾಸ್ಪೋರ್ಟ್ ಸಂಖ್ಯೆ, ದೂರವಾಣಿ ಸಂಖ್ಯೆ ಇತ್ಯಾದಿ.
- ಊರಲ್ಲಿ ಮಾಹಿತಿಗೆ ಸಂಪರ್ಕಿಸಲು ಇಬ್ಬರು ವ್ಯಕ್ತಿಗಳ ವಿವರಗಳು.
- ಭಾರತಕ್ಕೆ ಮರಳಲು ಸಂಭವನೀಯ ದಿನಾಂಕ
ಸೆರೆವಾಸದಲ್ಲಿರುವವರು ತುಂಬಬೇಕಾದ ಮಾಹಿತಿ
- ಎಲ್ಲಿ, ಯಾವಾಗ ಬಂಧಿಸಲಾಗಿದೆ?
- ಶಿಕ್ಷೆಯ ವಿವರಗಳು
- ನ್ಯಾಯಾಲಯದ ಹೆಸರು
- ನ್ಯಾಯಾಲಯದ ತೀರ್ಪು