janadhvani

Kannada Online News Paper

ಗಲ್ಫ್ ಇಶಾರ ಚಂದಾ ಅಭಿಯಾನ: ವಿಜೇತರಿಗೆ ಗೋಲ್ಡ್ ಕಾಯಿನ್ ವಿತರಣೆ

ಈ ವರದಿಯ ಧ್ವನಿಯನ್ನು ಆಲಿಸಿ


ಸೌದಿ ಅರೇಬಿಯಾ:ಕೆಸಿಎಫ್ ಗಲ್ಫ್ ಇಶಾರ ಚಂದಾ ಅಭಿಯಾನದ ಪ್ರಯುಕ್ತ 5 ಝೋನ್ ಮಟ್ಟದ ಅದೃಷ್ಟಶಾಲಿ ವಿಜೇತರಿಗೆ ಕೆ.ಸಿ.ಎಫ್ ನ್ಯಾಷನಲ್ ಕಮಿಟಿ ವತಿಯಿಂದ ಗೋಲ್ಡ್ ಕಾಯಿನ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕೆ.ಸಿ.ಎಫ್ ಮದೀನಾ ಝೋನ್ ಇದರ ಅಧೀನದಲ್ಲಿರುವ ಕೆ.ಸಿ.ಎಫ್ ತುರೈಫ್ ಸೆಕ್ಟರ್‌ನಲ್ಲಿ
ದಿನಾಂಕ 26 ರಂದು ಹಮ್ಮಿಕೊಂಡಿದ್ದ ಮಾಸಿಕ ಸ್ವಲಾತ್ ಹಾಗು ತಾಜುಶ್ಶರೀಅ ಅನುಸ್ಮರಣೆ ಕಾರ್ಯಕ್ರಮದಲ್ಲಿ  ಫೈಝಲ್ ಅಹ್ಸನಿ ಉಸ್ತಾದ್ ಅವರು, ಮದೀನಾ ಝೋನ್ ಮಟ್ಟದಲ್ಲಿ ಗೋಲ್ಡ್ ಕಾಯಿನ್ ವಿಜೇತರಾದ ಕೆ.ಸಿ.ಎಫ್ ತುರೈಫ್ ಸೆಕ್ಟರ್ ಸದಸ್ಯರಾದ ಜಲೀಲ್ ಬೈಕಂಪಾಡಿ ಅವರಿಗೆ ವಿತರಿಸಿದರು.

ವೇದಿಕೆಯಲ್ಲಿ ಕೆ.ಸಿ.ಎಫ್ ತುರೈಫ್ ಸೆಕ್ಟರಿನ ಅಧ್ಯಕ್ಷರಾದ ಅಸ್ಲಂ ಜಯಪುರ, ಪಬ್ಲಿಕೇಷನ್ ವಿಭಾಗದ ಅಧ್ಯಕ್ಷ ಮುಸ್ತಫ ಕಾರ್ಣಾಡ್, ಕಚೇರಿ ವಿಭಾಗದ ಅಧ್ಯಕ್ಷ ಜುನೈದ್ ದೊಡ್ಡಣ್ಣಗುಡ್ಡೆ, ಸಾಂತ್ವನ ವಿಭಾಗದ ಅಧ್ಯಕ್ಷ ಮನ್ಸೂರ್ ವಿಟ್ಲ ಹಾಗೂ ಎಲ್ಲಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಸಿನಾನ್ ಕನ್ನಂಗಾರ್ ರವರು ಕೊನೆಯಲ್ಲಿ ಧನ್ಯವಾದವಿತ್ತರು.

error: Content is protected !! Not allowed copy content from janadhvani.com