ಮಡಿಕೇರಿ:ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ಕೊಡಗು ಜಿಲ್ಲಾ ಡಿವಿಷನ್ ಹಾಗೂ ಯುನಿಟ್ ಗಳಿಂದ ಆಯ್ದ ಸಕ್ರೀಯ ಕಾರ್ಯಕರ್ತರ ಟೀಮ್ ಹಸನೈನ್ ಸಂಗಮವು ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷ ಕರೀಂ ಫಾಳಿಲ್ ಉಸ್ತಾದರ ಅಧ್ಯಕ್ಷತೆಯಲ್ಲಿ ದಾರುನ್ನಜಾತ್ ಸುನ್ನೀ ಸೆಂಟರ್ ನೆಲ್ಯಾಹುದಿಕೇರಿ ಯಲ್ಲಿ ನಡೆಯಿತು.ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಸುಫ್ಯಾನ್ ಸಖಾಫಿ ತರಗತಿಯನ್ನು ನಡೆಸಿದರು.ಎಸ್ಸೆಸ್ಸೆಫ್ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಹಾಗೂ ರಾಜ್ಯ ನಾಯಕ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಮುನ್ನುಡಿ ಭಾಷಣ ಮಾಡಿದರು.