janadhvani

Kannada Online News Paper

ಹಾಸನ ಜಿಲ್ಲಾ ಟೀಮ್ ಹಸನೈನ್ ಸಕ್ರೀಯ ಕಾರ್ಯಕರ್ತರ ಸಂಗಮ

ಹಾಸನ:ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ಹಾಸನ ಜಿಲ್ಲಾ ವ್ಯಾಪ್ತಿಯ ಡಿವಿಷನ್ ಹಾಗೂ ಯುನಿಟ್ ಗಳಿಂದ ಆಯ್ದ ಸಕ್ರೀಯ ಕಾರ್ಯಕರ್ತರ ಟೀಮ್ ಹಸನೈನ್ ಸಂಗಮ ಎಸ್ಸೆಸ್ಸೆಫ್ ಹಾಸನ ಜಿಲ್ಲಾಧ್ಯಕ್ಷ ಸುಲೈಮಾನ್ ಅಝ್ಹರಿರವರ ಅಧ್ಯಕ್ಷತೆಯಲ್ಲಿ ಆಲೂರುನಲ್ಲಿ ನಡೆಯಿತು.ಸಯ್ಯದ್ ಜಾಬಿರ್ ತಂಙಳ್ ದುಆ:ವನ್ನು ನೆರವೇರಿಸಿದರು.

ರಾಜ್ಯ ಸದಸ್ಯ ಹುಸೈನ್ ಸ ಅದಿ ಹೊಸ್ಮಾರ್ ಕಾರ್ಯಕರ್ಮವನ್ನು ಉದ್ಘಾಟಿಸಿದರು.ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ ರವರು ತರಗತಿಯನ್ನು ನಡೆಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಜಾಫರ್ ಹಾಸನ,ಜಿಲ್ಲಾ ನಾಯಕರಾದ ಅಬ್ದುಲ್ ರಹಿಮಾನ್ ಸ ಅದಿ,ರಫೀಕ್ ಆಲೂರು ಉಪಸ್ಥಿತರಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಜಿದ್ ಸ್ವಾಗತಿಸಿ,ಕೊನೆಗೆ ವಂದಿಸಿದರು.

error: Content is protected !! Not allowed copy content from janadhvani.com