ಮಕ್ಕಾ: KCF ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಹಜ್ಜ್ ಸ್ವಯಂ ಸೇವಕರ ಪೂರ್ವ ತಯಾರಿ ತಝ್ಕಿಯತ್ ಶಿಬಿರ ಸೆಕ್ಟರ್ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ರವರ ಅಧ್ಯಕ್ಷತೆಯಲ್ಲಿ ಕುದೈ ಏಷ್ಯನ್ ಹಾಲ್ ನಲ್ಲಿ ಜರಗಿತು.
ಉಮ್ಮರ್ ಮದನಿ ಖಾಮಿಲ್ ಸಖಾಫಿ ಪರಪ್ಪು ರವರು HVC ಕಾರ್ಯಕರ್ತರು ಪವಿತ್ರ ಮಕ್ಕಾ ಮಣ್ಣಿಗೆ ಅಲ್ಲಾಹನ ಅತಿಥಿಗಳಾಗಿ ಬರುವ ಹಾಜಿಗಳಿಗೆ ನೀಡುವ ಸೇವೆಯ ಮಹತ್ವ ಹಾಗೂ ಸಂಘಟಣಾ ನಿಯಮ ಪಾಲನೆ, ನಾಯಕರ ಅದೇಶ ಪಾಲನೆ, HVC ಸಮವಸ್ತ್ರದ ಸೂಕ್ಷ್ಮತೆಯ ಗೌರವ, ಹಾಜಿಗಳೊಂದಿಗೆ ತಾಳ್ಮೆ ಸ್ವಭಾವ ಉತ್ತಮ ಸ್ನೇಹ ಭಾಂದವ್ಯ ಹಾಗೂ ಸದಾ ಹಸನ್ಮುಖಿಯರಾಗಿ ಕಾರ್ಯಚರಿಸುವುದು ಈಗೇ ಹತ್ತು ಹಲವಾರು ವಿಷಯಗಳ ಬಗ್ಗೆ ಕಾರ್ಯಕರ್ತರ ಮನ ಕರಗುವ ರೀತಿಯಲ್ಲಿ ವಿವರಣೆ ನೀಡಿದರು.
KCF ಮಕ್ಕತ್ತುಲ್ ಮುಕರ್ರಮಃ ಸಾಂತ್ವನ ವಿಭಾಗ ಅಧ್ಯಕ್ಷರು ಮೂಸಾ ಹಾಜಿ ಕಿನ್ಯ ತಮ್ಮ ಅನುಭವಗಳನ್ನು ಕಾರ್ಯಕರ್ತರಿಗೆ ಹಂಚಿದರು.
KCF ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ ಶಿಕ್ಷಣ ವಿಭಾಗ ಅಧ್ಯಕ್ಷರು ಉಸ್ಮಾನ್ ಸಅದಿ ನೆಲ್ಯಾಡಿ ಮಾತಾನಾಡಿ ಶುಭ ಹಾರೈಸಿದರು.
ಈ ಸಂದರ್ಭ ಹರಂ ಶರೀಫ್ ನಲ್ಲಿ 40 ದಿವಸಗಳ ಕಾಲ ನಡೆಯುವ ಎಚ್. ವಿ. ಸಿ ಸೇವೆಗಳಿಗೆ ಕ್ಯಾಪ್ಟನ್ ಗಳಾಗಿ ಮೂಸಾ ಹಾಜಿ ಕಿನ್ಯ ಹಾಗೂ ಹನೀಫ್ ಸಖಾಫಿ ಬೊಳ್ಮಾರ್
ಮತ್ತು ಎಚ್. ವಿ. ಸಿ ಮೀಡಿಯಾ ಕನ್ವಿನರಾಗಿ ಕಲಂದರ್ ಶಾಫಿ ಅಸೈಗೋಳಿಯವರನ್ನು ಆಯ್ಕೆಮಾಡಲಾಯಿತು
ಕಾರ್ಯಕ್ರಮವನ್ನು KCF ಮಕ್ಕತುಲ್ ಮುಕರ್ರಮಃ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾಗೂ HVC ಸೆಕ್ಟರ್ ಕೋರ್ಡಿನೆಟರ್ ಇಕ್ಬಾಲ್ ಕಕ್ಕಿಂಜೆ ಸ್ವಾಗತಿಸಿ, ಸೆಕ್ಟರ್ ಅಡ್ಮಿನ್ ವಿಭಾಗ ಕಾರ್ಯದರ್ಶಿ ಕಲಂದರ್ ಶಾಫೀ ಅಸೈಗೋಳಿ ಕೃತಜ್ಞತೆ ಸಲ್ಲಿಸಿದರು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ