janadhvani

Kannada Online News Paper

SYS ಸ್ವಾತಂತ್ರ್ಯ ಪ್ರಜಾ ಸಂಗಮ ಯಶಸ್ವಿ ಗೊಳಿಸಲು ಕರೆ

ಮಂಗಳೂರು:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS)ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಸೆಂಟರ್ ಗಳಲ್ಲಿ”ಭಾರತ ಬಾರತೀಯರದ್ದಾಗಲಿ” ಎಂಬ ಘೋಷ ವಾಕ್ಯ ದೊಂದಿಗೆ 72 ನೇ ಸ್ವಾತಂತ್ರ್ಯ ದ ಅಂಗವಾಗಿ ಆಗಸ್ಟ್ 1 ರಿಂದ ಆಗಸ್ಟ್ 15 ತನಕ ಪ್ರಜಾ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದ ಉದ್ಘಾಟನೆಯು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಸೆಂಟರ್ ವ್ಯಾಪ್ತಿಯ ಬಿ ಸಿ ರೋಡ್ ಸ್ಪರ್ಶ ಹಾಲ್ ನಲ್ಲಿ ಆಗಸ್ಟ್ 1 ಸಾಯಂಕಾಲ 4 00 ಘಂಟೆಗೆ ಸರಿಯಾಗಿ ನಡೆಯಲಿದೆ.
ಸ್ಥಳೀಯ ಶಾಸಕರು ರಾಜಕೀಯ ಸಾಮಾಜಿಕ ಧಾರ್ಮಿಕ ನಾಯಕರು ಭಾಗವಹಿಸುವರು.

ಈ ಕಾರ್ಯಕ್ರಮ ವನ್ನು ಹೆಚ್ಚಾಗಿ ಪ್ರಚಾರಪಡಿಸಿ ?ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಲು ಈ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷರಾದ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com