ದುಬೈ:ದುಬೈ ಟ್ರಾನ್ಸ್‌ಪೋರ್ಟ್ ನ ಎಂಟು ಸೇವೆಗಳು ಸ್ಮಾರ್ಟ್ ಚಾನೆಲ್‌ಗಳ ಮೂಲಕ ಮಾತ್ರ ಇನ್ನು ಮುಂದೆ ಲಭ್ಯವಾಗಲಿವೆ ಎಂದು ದುಬೈ ಸಾರಿಗೆ ಪ್ರಾಧಿಕಾರ ಘೋಷಿಸಿದೆ.
ಜುಲೈ 22 ರಿಂದ, ಸೇವಾ ಕೇಂದ್ರಗಳಿಂದ ಯಾವುದೇ ನಿರ್ದಿಷ್ಟ ಸೇವೆಗಳು ಲಭ್ಯವಾಗುವುದಿಲ್ಲ ಎಂದು ಆರ್ಟಿಎ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದೆ.
ಸ್ಮಾರ್ಟ್ ಸಿಟಿ ಪ್ರಾಜೆಕ್ಟ್‌ನ ಭಾಗವಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದ್ದು, ಸೇವಾ ಕೇಂದ್ರಗಳಲ್ಲಿನ ಗರಿಷ್ಠ ಸಂಖ್ಯೆಯ ದಟ್ಟನೆಯನ್ನು ತಗ್ಗಿಸುವ ಗುರಿಯನ್ನು ಹೊಂದಿದೆ.
ಆರ್ಟಿಎ ವೆಬ್ ಸೈಟ್ www.rta.ae, ದುಬೈ ಡ್ರೈವ್ ಮೊಬೈಲ್ ಅಪ್ಲಿಕೇಶನ್, ಸ್ಮಾರ್ಟ್ ಟೆಲ್ಲರ್ ಯಂತ್ರ ಮತ್ತು ಕಾಲ್ ಸೆಂಟರ್ (8009090)ಮೂಲಕ ಇನ್ನು ಮುಂದೆ ಕೆಳಗಿನ ಎಂಟು ಸೇವೆಗಳು ಲಭ್ಯವಿರುತ್ತದೆ.
1. ಸ್ವಂತ ಒಡೆತನದಲ್ಲಿರುವ ವಾಹನಗಳ ನೋಂದಣಿ ನವೀಕರಣ (ಟೆಸ್ಟ್ ಅಗತ್ಯವಿರುವುದು)
2. ನೋಂದಾಯಿತ ವಾಹನಗಳ ವಿವರಣಾ ಪಟ್ಟಿಯನ್ನು ಮುದ್ರಿಸುವುದು
3. ಪ್ರವಾಸದ ರಿಟರ್ನ್ ಪ್ರಮಾಣಪತ್ರ
4. ಪ್ರಥಮ ಒಡೆತನದ ರಿಜಿಸ್ಟ್ರೇಷನ್ ಪ್ರಮಾಣಪತ್ರ
5. ವಾಹನಗಳ ಮಾಲೀಕತ್ವ ಪ್ರಮಾಣಪತ್ರ
6. ಮರು ವಿಮೆ ಪ್ರಮಾಣಪತ್ರ
7. ಕಳೆದುಹೋದ ಮಾಲೀಕತ್ವ ಪ್ರಮಾಣಪತ್ರಗಳನ್ನು ಹೊಸದಾಗಿ ಬದಲಿಸುನ ಅಪ್ಲಿಕೇಶನ್
8. ಕ್ಲಿಯರೆನ್ಸ್ ಪ್ರಮಾಣಪತ್ರ
ಮುಂದಿನ ಅಕ್ಟೋಬರ್ ನಿಂದ ಹೆಚ್ಚಿನ ಸೇವೆಗಳನ್ನು ಆನ್ ಲೈನ್ ಮೂಲಕ ಮಾತ್ರ ಒದಗಿಸಲಾಗುವಂತೆ ಕ್ರಮೀಕರಿಸಲಾಗುವುದು ಎಂದು ಆರ್‌ಟಿಎ ಅಧಿಕಾರಿಗಳು ತಿಳಿಸಿದ್ದಾರೆ.