janadhvani

Kannada Online News Paper

ಶುಭ ಸುದ್ದಿ: ವಿದೇಶಿಯರ ವೃತ್ತಿ ಬದಲಾವಣೆ- ಮುಹರಮ್ ನಿಂದ ಆರಂಭ

ರಿಯಾದ್: ಸೌದಿ ಅರೇಬಿಯಾದಲ್ಲಿ ಖಾಸಗಿ ವಲಯದಲ್ಲಿ ಕೆಲಸ ಮಾಡುವ ವಿದೇಶಿಯರ ವೃತ್ತಿ ಬದಲಾವಣೆಯು ಮಾನದಂಡಗಳಿಗೆ ಅನುಗುಣವಾಗಿ ಮುಹರಮ್ ಒಂದರಿಂದ ಜಾರಿಯಾಗಲಿದೆ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಇದು ದೇಶದ ಉದ್ಯೋಗ ಮಾರುಕಟ್ಟೆಯ ಪುನರ್ ಸಂಯೋಜನೆಯ ಭಾಗವಾಗಿದೆ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ವಕ್ತಾರ ಖಾಲಿದ್ ಅಬಲ್ ಖೈರ್ ಹೇಳಿದರು. ಅದಕ್ಕೆ ಮುಂಚಿತವಾಗಿ ಖಾಸಗಿ ಕಂಪನಿಗಳಿಗೆ ವೃತ್ತಿ ಬದಲಾವಣೆ ಸೇವೆಗಳನ್ನು ಜು.22 ರಿಂದ ಒದಗಿಸಲಾಗುತ್ತಿದೆ.

ಸಾಮಾಜಿಕ ಅಭಿವೃದ್ಧಿ ಪೋರ್ಟಲ್ ಮೂಲಕ ವೃತ್ತಿ ಬದಲಾವಣೆಗಳಿಗೆ ಅರ್ಜಿ ಸಲ್ಲಿಸಬೇಕು. ಎಂಜಿನಿಯರಿಂಗ್, ಆರೋಗ್ಯ ಮತ್ತು ಅಕೌಂಟಿಂಗ್ ನಂತಹ ವೃತ್ತಿಪರ ಉದ್ಯೋಗದ ವಿಭಾಗಗಳಿಗೆ ವೃತ್ತಿ ಬದಲಾಯಿಸುವವರು ತಮ್ಮ ತರಬೇತಿ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸಬೇಕು.

ಕೌನ್ಸಿಲ್ ಆಫ್ ಸೌದಿಸ್ ಇಂಜಿನಿಯರ್ಸ್, ಸೌದಿ ಕಮೀಷನ್ ಫಾರ್ ಹೆಲ್ತ್ ಸ್ಪೆಷಾಲಿಟೀಸ್, ಸೌದಿ ಆರ್ಗನೈಸೇಷನ್ ಫಾರ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್ ಮುಂತಾವುಗಳ ಸಹಯೋಗದೊಂದಿಗೆ ವೃತ್ತಿ ಬದಲಾಣಾ ಕಾರ್ಯಗಳು ಪೂರ್ಣಗೊಳ್ಳುತ್ತವೆ.

ಹೊಸ ಕಾನೂನಿನ ಪರಿಚಯದೊಂದಿಗೆ, ಭಾರತೀಯರು ಸೇರಿದಂತೆ ಅನೇಕ ಜನರ ಕೆಲಸದ ಬಿಕ್ಕಟ್ಟಿಗೆ ಪರಿಹಾರ ಲಭಿಸಲಿದೆ.

error: Content is protected !! Not allowed copy content from janadhvani.com