janadhvani

Kannada Online News Paper

ಸೌದಿಯಲ್ಲಿ ವಿದೇಶಿಗಳಿಗೆ ಇಖಾಮಾ ನವೀಕರಿಸಲು ಬಾಡಿಗೆ ಒಪ್ಪಂದ ಕಡ್ಡಾಯ

ಜಿದ್ದಾ : ಸೌದಿಯಲ್ಲಿ ವಿದೇಶಿಗಳಿಗೆ ಇಖಾಮಾ ನವೀಕರಿಸಲು ಬಾಡಿಗೆ ಒಪ್ಪಂದವನ್ನು ಕಡ್ಡಾಯಗೊಳಿಸಿದೆ. ಕೆಲಸದ ಪರವಾನಗಿಗೆ ಮತ್ತು ಇಖಾಮಾವನ್ನು ನವೀಕರಿಸಲು ಬಾಡಿಗೆ ಒಪ್ಪಂದವನ್ನು ಕಡ್ಡಾಯಗೊಳಿಸಲು ಚಿಂತಿಸಲಾಗಿದೆ.
ವಸತಿ ನಿರ್ವಹಣಾ ಸಚಿವಾಲಯದ ಅಡಿಯಲ್ಲಿ ಈಜಾರ್ ಪ್ರೋಗ್ರಾಂ ಸ್ಟ್ರಾಟಜಿಕ್ ಪೆರ್ಫೋಮೆನ್ಸ್‌ನೊಂದಿಗೆ ಆನ್‌ಲೈನ್ ಮೂಲಕ ಕ್ರಮೀಕರಿಸಿ ನವೀಕರಣ ಕಾರ್ಯವಿಧಾನವನ್ನು ಏಕೀಕರಿಸಲಾಗುತ್ತದೆ.

“ಈಜಾರ್”ನಲ್ಲಿ  ದಾಖಲಿಸಲಾದ ಬಾಡಿಗೆ ಒಪ್ಪಂದವಿಲ್ಲದವರ ಇಖಾಮ ನವೀಕರಣ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಜಿದ್ದಾದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸ್ಟ್ರಾಟೆಜಿಕ್ ಪರ್ಫಾರ್ಮೆನ್ಸ್ ಕಾರ್ಯಕ್ರಮದ ನಿರ್ದೇಶಕ ಅಬ್ದುರ್ರಹ್ಮಾನ್ ಅಲ್-ಝಮಾರಿ ಈ ಕುರಿತು ಸೂಚನೆ ನೀಡಿದ್ದಾರೆ.ರಿಯಲ್ ಎಸ್ಟೇಟ್ ರಂಗವನ್ನು ನಿಯಂತ್ರಿಸಲು ಮತ್ತು ಬಾಡಿಗೆದಾರರು ಮತ್ತು ಕಟ್ಟಡ ಮಾಲೀಕರ ಹಕ್ಕುಗಳನ್ನು ರಕ್ಷಿಸಲು ಈಜಾರ್ ಯೋಜನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.

ಇದರೊಂದಿಗೆ ಏಕೀಕೃತ ಬಾಡಿಗೆ ಒಪ್ಪಂದವನ್ನು ಪರಿಚಯಿಸಲಾಗುವುದು. ಬಾಡಿಗೆ  ಒಪ್ಪಂದವನ್ನು ಸರಳ ಹಂತಗಳ ಮೂಲಕ ಸುಲಭವಾಗಿ ನೋಂದಾಯಿಸಬಹುದು. ಗೃಹ ಸಚಿವಾಲಯದ ಆನ್ಲೈನ್ ಸೇವೆಯಾದ ಅಬ್ಶೀರ್  ಖಾತೆ ಇಲ್ಲದಿದ್ದರೂ ಬಾಡಿಗೆ ಒಪ್ಪಂದವನ್ನು ನೋಂದಾಯಿಸ ಬಹುದು ಎಂದು ವ್ಯಕ್ತಪಡಿಸಲಾಗಿದೆ.

error: Content is protected !! Not allowed copy content from janadhvani.com