ದುಬೈ: ಟೆಲಿ ಕಮ್ಯುನಿಕೇಶನ್ಸ್ ಆ್ಯಂಡ್ ರೆಗ್ಯುಲೇಟರಿ ಅಥಾರಿಟಿ(ಟಿ.ಆರ್.ಐ)ಯು ನಾಗರಿಕರಿಗೆ ಎಚ್ಚರಿಕೆಯನ್ನು ನೀಡಿದೆ.
ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಎಸ್ ಎಮ್‌ಎಸ್ ಪ್ರಚಾರ ಪಡಿಸಲಾಗುತ್ತಿದ್ದು, ಅದನ್ನು ಕ್ಲಿಕ್ ಮಾಡುವಂತೆ ಆದೇಶ ನೀಡಲಾಗುತ್ತದೆ. ಅದು ನಿಮ್ಮ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಎಸ್ಎಮ್ ಎಸ್ ಆಗಿದ್ದು, ಯಾವುದೇ ಕಾರಣಕ್ಕೂ ಅದನ್ನು ತೆರೆಯದಂತೆ ಟಿಆರ್ಐಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪೋಂನ್ಸ್ ಟೀಂ ತಿಳಿಸಿದೆ.
ನ್ಯಾಯಾಲಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ತನಗೆ ಮಾಹಿತಿ ಇದೆ ಎಂಬಂತೆ ಹೆಚ್ಚಿನ ಎಸ್ ಎಂ ಎಸ್‌ಗಳು ರವಾನಿಸಲ್ಪಡುತ್ತಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಒತ್ತಿರಿ ಎಂಬ ಸಂದೇಶವನ್ನು ನೀಡಲಾಗುತ್ತಿದೆ. ಆದರೆ, ಆ ಲಿಂಕನ್ನು ನೀವು ಒತ್ತಿದಾಗ ನಿಮ್ಮ ಮೊಬೈಲ್‌ನಲ್ಲಿ ಅಡಕವಾಗಿರುವ ಮಾಹಿತಿಗಳು ಹ್ಯಾಕರ್‌ಗೆ ಲಭಿಸುತ್ತದೆ ಎಂದು ಪ್ರಮುಖ ಪತ್ರಿಕೆ ಅಲ್ ಬಯಾನ್ ವರದಿ ಮಾಡಿದೆ.
ಯಾವುದೇ ಪರಿಚಯ ಇಲ್ಲದವರ ಇ-ಮೇಲ್ ತೆರೆಯುವುದಾಗಲಿ, ಅನಧಿಕೃತ ಸೈಟ್‌ಗಳಿಂದ ಸಾಫ್ಟ್‌ವೇರ್ ಗಳನ್ನು ಡೌನ್‌ಲೋಡ್ ಮಾಡುವುದಾಗಲಿ ಮಾಡದಂತೆ ಅಧಿಕಾರಿಗಳು ಎಚ್ಚರಿಸಿದ್ದಾರೆ.