janadhvani

Kannada Online News Paper

ನಾಳೆ: ಕಾಟಿಪಳ್ಳದಲ್ಲಿ SSF ಸಕ್ರೀಯ ಕಾರ್ಯಕರ್ತರ ಸಂಗಮ

ಮಂಗಳೂರು: ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ದ.ಕ ಜಿಲ್ಲೆ ವ್ಯಾಫ್ತಿಯ ಯುನಿಟ್ ಗಳಿಂದ ಆಯ್ದ ಸಕ್ರೀಯ ಕಾರ್ಯಕರ್ತರ ಸಂಗಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ರವರ ಅಧ್ಯಕ್ಷತೆಯಲ್ಲಿ ಜುಲೈ 20 ಶುಕ್ರವಾರ ಸಂಜೆ 6:00 ಗಂಟೆಗೆ ಕಾಟಿಪಳ್ಳದ ಜಾಸ್ಮಿನ್ ಹಾಲ್ ನಲ್ಲಿ ನಡೆಯಲಿರವುದು.
ಕಾರ್ಯಕ್ರಮದಲ್ಲಿ ಸಿ.ಎನ್ ಜಾಫರ್ ಕಾಸರಗೋಡ್,ರಾಜ್ಯ ಕಾರ್ಯದರ್ಶಿ ಸುಫಿಯಾನ್ ಸಖಾಫಿ ಕಾವಲ್ ಕಟ್ಟೆ,ಕೋಶಾಧಿಕಾರಿ ಶರೀಫ್ ಬೆಂಗಳೂರು ಹಾಗೂ ಇತರ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.
ಸಂಜೆ 4:00 ಗಂಟೆಗೆ ದ.ಕ ಜಿಲ್ಲೆ ವ್ಯಾಪ್ತಿಯ ಡಿವಿಷನ್ ಗಳಿಂದ ಆಯ್ಕೆಯಾದ ಟ್ರೈನರ್ಸ್ ಗಳಿಗೆ ತರಗತಿ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪ್ರಕಟನೆ ತಿಳಿಸಿದೆ.

error: Content is protected !! Not allowed copy content from janadhvani.com