ಬೆಂಗಳೂರು: (ಜನಧ್ವನಿ ವಾರ್ತೆ) ಜಾರ್ಖಂಡ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮೀ ಅಗ್ನಿವೇಶ್ ರಿಗೆ ದುಷ್ಕರ್ಮಿಗಳ ಗುಂಪೊಂದು ಥಳಿಸಿರುವುದನ್ನು ಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ಖಂಡಿಸಿದ್ದಾರೆ. ದೇಶದ ಶಾಂತಿಗಾಗಿ, ಸೌರ್ಹಾದಕ್ಕಾಗಿ ಸದಾ ಧ್ವನಿಯೆತ್ತುತ್ತಿರುವ ಸ್ವಾಮಿ ಅಗ್ನಿವೇಶ್ ರಂಥ ಸಾಮಾಜಿಕ ಕಾರ್ಯಕರ್ತರಿಗೆ ಅಭದ್ರತೆಯ ವಾತಾವಾರಣ ನಿರ್ಮಾಣವಾಗುದು ದೇಶಕ್ಕೆ ಅವಮಾನಕರವಾಗಿದೆ. ಸ್ವಾಮಿಜಿಯವರ ವಯಸ್ಸಿನ ಹಿರಿತನವನ್ನೂ ಲೆಕ್ಕಿಸದೇ ಅನಾಗರಿಕತೆ ಪ್ರದರ್ಶಿಸಿರುವ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕಾಗಿದೆ. ಆರೋಪಿಗಳು ನಿಗದಿತ ರಾಜಕೀಯ ಪಕ್ಷ-ಸಿದ್ಧಾಂತವೊಂದರೊಂದಿಗೆ ಸಂಬಂಧ ಇರುವವರೆಂದು ಮೇಲ್ನೋಟಕ್ಕೆ ಸ್ಪಷ್ಟ ವಾಗುತ್ತಿದೆ. ಆ ಕಿಡಿಗೇಡಿಗಳನ್ನು ಬೆಳೆಸುತ್ತಿರುವ ಶಕ್ತಿಗಳನ್ನು ಸರಕಾರವು ಮಟ್ಟ ಹಾಕಿ ದೇಶದಲ್ಲಿ ಶಾಂತಿಯನ್ನು ಮರು ಸ್ಥಾಪಿಸಬೇಕು ಎಂದು ಇಸ್ಮಾಈಲ್ ಸಖಾಫಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.