ಪ್ರತಿಭಾನ್ವಿತ ವಿದ್ವಾಂಸರೂ, ವಾಗ್ಮಿಯೂ ಆಗಿರುವ ಹಾಫಿಳ್ ಮುಹಮ್ಮದ್ ಇಲ್ಯಾಸ್ ಸಖಾಫಿ ಮಾಡನ್ನೂರು ಉಸ್ತಾದರ ನೇತೃತ್ವದಲ್ಲಿ ಹುಬ್ಬುಲ್ ಹಬೀಬ್ﷺ ಎಂಬ ಹೆಸರಿನ ಆನ್ಲೈನ್ ಆತ್ಮೀಯ ಮಜ್ಲಿಸ್ ನಾಳೆಯಿಂದ ಪ್ರಾರಂಭಗೊಳ್ಳಲಿದೆ.

ಆನ್ಲೈನ್ ದಅವಾ ರಂಗದಲ್ಲಿ ಆತ್ಮೀಯ ಮಜ್ಲಿಸ್ಗಳು ಮುಂಚೂಣಿಯಲ್ಲಿರುವ ಪ್ರಸಕ್ತ ಸನ್ನಿವೇಶದಲ್ಲಿ ಪುಣ್ಯ ಪ್ರವಾದಿ ಮುಹಮ್ಮದ್ﷺರ ಧಾರ್ಮಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಪ್ರಮುಖವಾದ ಕಾರ್ಯವಾಗಿದೆ ದಅವಾ.
ಮೊದಲೆಲ್ಲಾ ಜನರು ಮಸೀದಿಗಳಲ್ಲಿ ಅಥವಾ ಸೌಕರ್ಯವಿರುವ ಕಡೆ ಜಮಾಯಿಸಿ, ಧಾರ್ಮಿಕ ಪ್ರವಚನಗಳನ್ನು ಕೇಳಿ, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಧಾರ್ಮಿಕತೆಯನ್ನು ಕಂಡುಕೊಳ್ಳುತ್ತಿದ್ದರು. ಇಂತಹ ಸಮಾವೇಶಗಳಿಗೆ ಸಾಂಕ್ರಾಮಿಕ ರೋಗ ಭಾಧೆಯಿಂದ ತೊಡಕಾಗಿರುವುದರಿಂದ ಆನ್ಲೈನ್ ದಅವಾ ಕ್ರಾಂತಿ ಈಗಾಗಲೇ ಹಲವಾರು ವಿದ್ವಾಂಸರ ನೇತೃತ್ವದಲ್ಲಿ ನಡೆದು ಬರುತ್ತಿದೆ.
ಆನ್ಲೈನ್ ದಅವಾ ರಂಗಕ್ಕೆ ತನ್ನ ಅಭೂತಪೂರ್ವ ವಿದ್ವತ್ತಿನಿಂದ, ಮನಮುಟ್ಟುವ ಪ್ರವಚನದಿಂದ ಜನಮನಗೆದ್ದಿರುವ ಯುವ ವಿದ್ವಾಂಸ ಹಾಫಿಳ್ ಮುಹಮ್ಮದ್ ಇಲ್ಯಾಸ್ ಸಖಾಫಿ ಮಾಡನ್ನೂರು ಉಸ್ತಾದರ ನೇತೃತ್ವದಲ್ಲಿ ಹುಬ್ಬುಲ್ ಹಬೀಬ್ﷺ ಆತ್ಮೀಯ ಮಜ್ಲಿಸ್ ಕಾರ್ಯಕ್ರಮವು ಜೂನ್ 13ನೇ ಅದಿತ್ಯವಾರ ಅಸ್ತ ಸೋಮವಾರ ರಾತ್ರಿ9:30ರಿಂದ ಆರಂಭಗೊಳ್ಲಲಿದೆ.
ಪವಿತ್ರ ಖುರ್ಆನ್ ಪ್ರಭಾಷಣ, ಝಿಕ್ರ್, ಸ್ವಲಾತ್, ದುಆ ಮಜ್ಲಿಸ್, ಮದ್ಹುರ್ರಸೂಲ್ ﷺ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಹುಬ್ಬುಲ್ ಹಬೀಬ್ﷺ ಆನ್ಲೈನ್ ಮಜ್ಲಿಸ್ ಉದ್ಘಾಟನಾ ಸಮಾರಂಭ ಸಯ್ಯಿದ್ ನಿಝಾಮುದ್ದೀನ್ ಬಾಫಖಿ ಸಖಾಫಿ ಕೊಯಿಲಾಂಡಿ ಇವರ ನೇತೃತ್ವದಲ್ಲಿ ನಡೆಯಲಿದೆ.
ಪ್ರತಿ ದಿನ ರಾತ್ರಿ VOICE OF HAFIL MUHAMMAD ILYAS SAQAFI, MADANNOOR ಎಂಬ ಯೂಟ್ಯೂಬ್ ಚಾನೆಲ್ನಲ್ಲಿ 9:30ರಿಂದ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ವಿಶ್ವಾಸಿಗಳೆಲ್ಲರೂ ಶ್ರಮಿಸಬೇಕೆಂದು, ಕಾರ್ಯಕ್ರಮದ ನಡೆಯುವ ಯೂಟ್ಯೂಬ್ ಚಾನೆಲ್ ಈ ಲಿಂಕಿನ ಮೂಲಕ ಚಂದಾದಾರಾಗಬೇಕೆಂದು ಸಂಘಟಕರು ವಿನಂತಿಸಿದ್ದಾರೆ.ಚಾನೆಲ್ ಲಿಂಕ್ VOICE OF HAFIL ILYAS SAQAFI MADANNOOR
















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ತಪ್ಪು ಯಾರು ಮಾಡಿದರೂ ತಪ್ಪೇ ಒಂದು ಬಾಗಕ್ಕೆ ಮಾತ್ರ ಜನಪ್ರತಿನಿಧಿಗಳ ಹೇಳಿಕೆ ಸೀಮಿತವಾಗಬಾರದು.
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ಎಸ್ಡಿಪಿಐ ಹಾವೇರಿ ಜಿಲ್ಲೆ- ನೂತನ ಅಧ್ಯಕ್ಷರಾಗಿ ಜಿಲಾನಿ ಮೇದೂರು ಆಯ್ಕೆ
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಮತದಾನವನ್ನು ಯಾರೂ ತಪ್ಪಿಸಿಕೊಳ್ಳಬಾರದು: ಕರ್ನಾಟಕ ಮುಸ್ಲಿಂ ಜಮಾಅತ್