janadhvani

Kannada Online News Paper

ಎಸ್ಡಿಪಿಐ ಹಾವೇರಿ ಜಿಲ್ಲೆ- ನೂತನ ಅಧ್ಯಕ್ಷರಾಗಿ ಜಿಲಾನಿ ಮೇದೂರು ಆಯ್ಕೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾವೇರಿ ಜಿಲ್ಲೆಯ 2024-2027 ರ ಅವಧಿಯ ನೂತನ ಅಧ್ಯಕ್ಷರಾಗಿ ಜಿಲಾನಿ ಮೇದೂರು ಉಪಾಧ್ಯಕ್ಷರಾಗಿ ಖಾಸೀಮ್ ರಬ್ಬಾನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ಅಕ್ಬರ್ ಅಲಿ ಮತ್ತು ರಫೀಕ್ ಮೇದೂರು ಕಾರ್ಯದರ್ಶಿಗಳಾಗಿ ಯಾಸಿರ್ ಇರ್ಷಾದ್ ಮತ್ತು ಮುಬಾರಕ್ ಕಚವಿ ಕೋಶಾಧಿಕಾರಿಯಾಗಿ ಜಬಿವುಲ್ಲಾ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಸವುದ್ ಮೇದೂರು, ನೂರುಲ್ಲಾ ಮಕಾಂದಾರ, ಸದ್ದಾಂ ಹುಸೇನ್, ಸಲ್ಮಾನ್ ಖತೀಬ್, ರವರು ಆಯ್ಕೆಯಾದರು.
ಹಾವೇರಿ ಜಿಲ್ಲಾ ಸಮಿತಿಯ ಚುನಾವಣಾ ಪ್ರಕ್ರಿಯೆಯನ್ನು ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ರಂಜಾನ್ ಕಡಿವಾಳ ರವರು ನಡೆಸಿಕೊಟ್ಟರು.

ಜಿಲ್ಲಾ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮಜೀದ್ ತುಂಬೆ ರವರು ಕರ್ನಾಟಕ ಸರ್ಕಾರದ ತೀರ್ಮಾನಗಳಲ್ಲಿ ಯು-ಟರ್ನ್ ತೆಗೆದುಕೊಂಡಿರುವುದನ್ನು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳನ್ನು ನಿರ್ಲಕ್ಷಿಸಿರುವುದನ್ನು ನಿಲ್ಲಿಸಬೇಕು ಇದರಲ್ಲಿ ಗುಂಪು ಹತ್ಯೆ, ಮಸೀದಿ ಧ್ವಂಸ ಮತ್ತು ದಲಿತರ ಹಾಗೂ ಚರ್ಚುಗಳ ಮೇಲೆ ದಾಳಿಗಳನ್ನು ಖಂಡಿಸಿದರು. ಜನರು ಸಿಎಎ ಮತ್ತು ಎನ್‌ಆರ್‌ಸಿ ಯಂತಹ ಕಾನೂನುಗಳಿಗೆ ಧೈರ್ಯವಾಗಿ ವಿರೋಧ ವ್ಯಕ್ತಪಡಿಸಿರುವುದನ್ನು ಮೆಚ್ಚಿದರು ಮತ್ತು ನಾಯಕರು ಹಾಗೂ ಬೆಂಬಲಿಗರು ಮಾಡಿದ ತ್ಯಾಗಗಳನ್ನು ಸ್ಮರಿಸಿದರು “ನಮ್ಮ ಪಕ್ಷ ಸಾಮಾನ್ಯ ಜನರಿಂದ ದೊರೆಯುವ ದೇಣಿಗೆಯ ಮೇಲೆ ನಡೆಯುತ್ತದೆ, ಇದು ನಮ್ಮ ಪಕ್ಷದ ಮೇಲಿನ ಅವರ ನಂಬಿಕೆಯನ್ನು ತೋರಿಸುತ್ತದೆ,” ಎಂದು ಅವರು ಹೇಳುತ್ತಾ ಈ ಸಂದರ್ಭದಲ್ಲಿ ಮಹಿಳೆ ಯೊಬ್ಬರು ತಮ್ಮ ಕಿವಿಯ ಭೂಷಣಗಳನ್ನು ದೇಣಿಗೆಯಾಗಿ ನೀಡಿದ ಮತ್ತು ಬಾಲಕನೊಬ್ಬನು ತನ್ನ ಉಳಿತಾಯವನ್ನು ಪಕ್ಷಕ್ಕೆ ನೀಡಿದ ಉದಾಹರಣೆಗಳನ್ನು ಅವರು ಹಂಚಿಕೊಂಡರು.ಯಶಸ್ಸು ತ್ಯಾಗದ ಮೂಲಕವೇ ಸಾಧ್ಯ. ನಾವು ಭಯವಿಲ್ಲದೆ ಅನ್ಯಾಯದ ವಿರುದ್ಧ ಹೋರಾಟವನ್ನು ಮುಂದುವರಿಸ ಬೇಕು ಎಂದು ಮಜೀದ್ ತುಂಬೆ ಕರೆ ನೀಡಿದರು.

error: Content is protected !! Not allowed copy content from janadhvani.com