janadhvani

Kannada Online News Paper

ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ

ಬೆಂಗಳೂರು: ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಜೂನ್ನಲ್ಲಿ ನಡೆಸಿದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಜು. 19ರಂದು ಪ್ರಕಟಿಸಲಿದ್ದು, ಮಧ್ಯಾಹ್ನ 12 ಗಂಟೆ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ರವಾನಿಸಲಿದೆ.

ಪ್ರೌಢ ಶಾಲೆಗಳಲ್ಲಿ ಜು. 20ರಂದು ಮಧ್ಯಾಹ್ನ 12 ಗಂಟೆ ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

”2018ರ ಜೂನ್ 21ರಿಂದ 28ರವರೆಗೆ ರಾಜ್ಯದ 673 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ನಡೆದಿತ್ತು. ಜುಲೈ 8ರಿಂದ ರಾಜ್ಯದ 9 ಶೈಕ್ಷಣಿಕ ಜಿಲ್ಲೆಗಳ 50 ಮೌಲ್ಯಮಾಪನ ಕೇಂದ್ರಗಳಲ್ಲಿ ಒಟ್ಟು 10,946 ಮೌಲ್ಯಮಾಪಕರು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದರು. ಮೌಲ್ಯಮಾಪನದ ನಂತರ ಅಂಕಗಳನ್ನು ಅಂತರ್ಜಾಲ ಆಧಾರಿತ ತಂತ್ರಾಂಶದ ನೆರವಿನೊಂದಿಗೆ ಮೌಲ್ಯಮಾಪನ ಕೇಂದ್ರಗಳಿಂದ ನೇರವಾಗಿ ಮಂಡಳಿಯ ಸರ್ವರ್ಗೆ ವರ್ಗಾಯಿಸಲಾಗಿದೆ. ಈ ನೂತನ ಪ್ರಯತ್ನ ಕೂಡ ಯಶಸ್ವಿಯಾಗಿದೆ,” ಎಂದು ಮಂಡಳಿ ತಿಳಿಸಿದೆ.
ವಿಷಯವಾರು ಫಲಿತಾಂಶ
ವಿಷಯ ಪರೀಕ್ಷೆಗೆ ಹಾಜರಾದವರು ಪಾಸಾದವರು ಶೇ. ಫಲಿತಾಂಶ
ಪ್ರಥಮ ಭಾಷೆ: 60354 34060 56.43
ದ್ವಿತೀಯ ಭಾಷೆ: 95,197 50074 52.6
ದ್ವಿತೀಯ ಭಾಷೆ: 54,308 34,043 62.69
ಗಣಿತ : 1,19,278 46,672 39.13
ವಿಜ್ಞಾನ: 77,558 45,471 58.63
ಸಮಾಜ ವಿಜ್ಞಾನ: 67,020 39,654 59.17
ಲಿಂಗವಾರು ಫಲಿತಾಂಶ:
ಈ ಬಾರಿ 1,32,692 ಬಾಲಕರು ಪರೀಕ್ಷೆ ಬರೆದಿದ್ದು, ಈ ಪೈಕಿ 50,327 ಮಂದಿ ಪಾಸಾಗಿದ್ದು, ಶೇ 37.39 ಫಲಿತಾಂಶ ಬಂದಿದೆ. ಹಾಗೆಯೇ, ಪರೀಕ್ಷೆ ಬರೆದ 75,459 ಬಾಲಕಿಯರ ಪೈಕಿ 34,374 ಮಂದಿ ಉತ್ತೀರ್ಣರಾಗಿದ್ದು, ಶೇ 45.55ರಷ್ಟು ಫಲಿತಾಂಶ ದಾಖಲಾಗಿದೆ.
ನಗರ ಮತ್ತು ಗ್ರಾಮೀಣ ಫಲಿತಾಂಶ:
ನಗರ ಪ್ರದೇಶದಲ್ಲಿ 1,03,360 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, 41,133 ಮಂದಿ (ಶೇ 39.8) ಉತ್ತೀರ್ಣರಾಗಿದ್ದಾರೆ. ಹಾಗೆಯೇ, ಗ್ರಾಮೀಣ ಪ್ರದೇಶದಲ್ಲಿ 1,04,791 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 43,568 ಮಂದಿ (ಶೇ 41.58) ಪಾಸಾಗಿದ್ದಾರೆ.

error: Content is protected !! Not allowed copy content from janadhvani.com