ಮದೀನಾ : ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಭಾರತದಿಂದ ಆಗಮಿಸಿದ ಮೊದಲ ಹಜ್ಜಾಜಿಗಳ ತಂಡ ಶನಿವಾರದಂದು ಮದೀನಾ ಮುನವ್ವರದ ಕಿಂಗ್ ಅಬ್ದುಲ್ ಅಝೀಝ್ ವಿಮಾನ ನಿಲ್ದಾಣ ತಲುಪಿತು. ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಹಜ್ಜ್ ವಾಲೇಂಟಿಯರ್ ಕೋರ್ ಕಾರ್ಯಕರ್ತರು ಹಜ್ಜಾಜಿಗಳಿಗೆ ನೀರು ಹಾಗೂ ಖರ್ಜೂರ ನೀಡಿ ಆದರದಿಂದ ಸ್ವಾಗತಿಸಿದರು.
ನಂತರ ಹಜ್ಜಾಜಿಗಳು ತಂಗುವ ವಸತಿಗಳಿಗೆ ತೆರಳಿದ ಹೆಚ್.ವಿ.ಸಿ ಕಾರ್ಯಕರ್ತರು ಹಜ್ಜಾಜಿಗಳ ಲಗೇಜ್ ಸಾಗಿಸಲು ಸಹಕರಿಸಿದರು. ಈ ವೇಳೆ ಭೇಟಿ ನೀಡಿದ ಭಾರತೀಯ ಕನ್ಸೂಲೆಟ್ ಜನರಲ್ ನೂರ್ ರಹ್ಮಾನ್ ಶೇಖ್, ಹಜ್ಜಾಜಿಗಳಿಗೆ ನೀಡಲಾದ ವಸತಿ ಸೌಲಭ್ಯ ಗಳ ಬಗ್ಗೆ ಪರಿಶೀಲನೆ ನಡೆಸಿದರು. ಹಜ್ಜಾಜಿಗಳ ಸಮಸ್ಯೆ ಬಗೆಹರಿಸಲು ತಕ್ಷಣವೇ ಕ್ರಮಕೈಗೊಳ್ಳುವಂತೆ ಸಿಬ್ಬಂದಿ ಗಳಿಗೆ ತಿಳಿಸಿದರು.
ಇನ್ನು ವಿವಿಧ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಅವರು ಹಜ್ಜಾಜಿಗಳ ಸಿಮ್ ಕಾರ್ಡ್, ಲಗೇಜ್ ಮಿಸ್ಸಿಂಗ್ ಸಮಸ್ಯೆ ಪರಿಹರಿಸುವ ಬಗ್ಗೆ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು .ದೆಹಲಿ, ಗಯಾ, ಗುವಾಹಟಿ, ಲಕ್ನೊ ಹಾಗೂ ಶ್ರೀ ನಗರ ಸೇರಿದಂತೆ 5 ವಿಮಾನಗಳಲ್ಲಿ 3000ಕ್ಕೂ ಅಧಿಕ ಹಜ್ಜಾಜಿಗಳು ಶನಿವಾರ ದಂದು ಮದೀನಾಕ್ಕೆ ಆಗಮಿಸಿದ್ದಾರೆ. ಈ ವೇಳೆ ಕೆಸಿಎಫ್ ಹೆಚ್.ವಿ.ಸಿ ಮದೀನಾ ಚೇರ್ಮೆನ್ ತಾಜುದ್ದೀನ್ ಸುಳ್ಯ, ಕನ್ವೀನರ್ ರಝಾಕ್ ಸಂತೋಷ್ ನಗರ , ಫಾರೂಖ್ ನಈಮಿ, ಜಬ್ಬಾರ್ ಉಪ್ಪಿನಂಗಡಿ, ರಝಾಕ್ ಬೈತಡ್ಕ,ಅಶ್ರಫ್ ಸಖಾಫಿ ನೂಜಿ,ಅಬೂಬಕ್ಕರ್ ಉದ್ದ ಬೆಟ್ಟು, ಇಕ್ಬಾಲ್ ಕುಪ್ಪೆಪದವು, ಹೈದರ್ ಉದ್ದಬೆಟ್ಟು, ಉಮರ್ ಗೇರುಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ವರದಿ:ಹಕೀಮ್ ಬೋಳಾರ್















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು