janadhvani

Kannada Online News Paper

ರೈಸ್ಕೋ ಗ್ರೂಪ್ ಆಫ್ ಕಂಪನಿ ಸೌದಿ ಅರೇಬಿಯಾ ಇದರ ಸಮವಸ್ತ್ರ ಬಿಡುಗಡೆ


ದಮ್ಮಾಮ್: ರೈಸ್ಕೋ ಗ್ರೂಪ್ ಆಫ್ ಕಂಪನಿ ಸೌದಿ ಅರೇಬಿಯಾ
ಇದರ ವತಿಯಿಂದ ಎರ್ಪಡಿಸಿದ ಗೆಟ್ಟು ಗೆದರ್ ಪಾರ್ಟಿ ಕಾರ್ಯಕ್ರಮವು ದಿನಾಂಕ 12/07/2018 ರಾತ್ರಿ 9 ಘಂಟೆಗೆ ಸರಿಯಾಗಿ ಅಲ್ ಕೋಬರ್ ಹೊಲಿಡೇ ಇನ್ನ್ ಹೋಟೆಲ್ ನಲ್ಲಿ ಬಹಳ ವಿಜ್ರಂಬಣೆಯಿಂದ ನಡೆಯಿತು.
ಮೊದಲಿಗೆ ಅಬೂಬಕ್ಕರ್ ಸಿದ್ದೀಕ್ ನಿಝಾಮಿ ಉಸ್ತಾದ್ ದುಆ ನೆರೆವೆರಿಸಿಕೊಟ್ಟರು ನಂತರ ಮೊಹಮ್ಮದ್ ಅಶ್ರಫ್ ನಾವುಂದ ರವರು ಕಾರ್ಯಕ್ರಮಕ್ಕೆ ಬಂದ ಎಲ್ಲಾರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಲೈಮಾನ್ ರವರು ನಿರ್ವಹಿಸಿದರು. ಅದರ ಬಳಿಕ ನಮ್ಮ ಕಂಪನಿಯಲ್ಲಿ ಕಾರ್ಯಚರಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ಕಂಪನಿಯ ಬಗ್ಗೆ ಅನುಭವದ ಮಾತನಾಡಲು ಅವಕಾಶ ನೀಡಲಾಯಿತು. ಈ ಅವಕಾಶವನ್ನು ನಮ್ಮ ಎಲ್ಲಾ ಸಿಬ್ಬಂದಿಗಳು ಬಹಳ ಅತ್ಮೀಯವಾಗಿ ಕಂಪೆನಿಯಲ್ಲಿ ಸಿಗುವ ಎಲ್ಲಾ ಸೌಲತ್ತುಗಳ ಬಗ್ಗೆ ಹಾಗೂ ಮುಖ್ಯವಾಗಿ ರೈಸ್ಕೋ ಗ್ರೂಪ್ ಆಫ್ ಕಂಪನಿ ಸೌದಿ ಅರೇಬಿಯಾ ಇದರ ಸಿ.ಇ.ಓ ಆಗಿರುವ ಜನಾಬ್ ಅಬೂಬಕ್ಕರ್ ರೈಸ್ಕೋ ರವರನ್ನು ಮನತುಂಬಿ ಕೊಂಡಾಡಿದರು. ನಂತರ ಮೊಹಮ್ಮದ್ ಅನಸ್ ರವರು ಕಂಪೆನಿಯ ಸಮವಸ್ತ್ರ ಬಿಡುಗಡೆ ಮಾಡಿದರು. ನಂತರ ಮೊಹಮ್ಮದ್ ಸಖಾಫಿ ತೆಲಕ್ಕಿ, ಫೈನಾನ್ಸ್ ಮೆನೆಜರ್ ಸುಧೀರ್ ಶೆಟ್ಟಿ, ಸಿದ್ಧೀಕ್ ಪಡುಬಿದ್ರೆ ಹಾಗೂ ಹಂಝಾ ಕನ್ನಂಗಾರ್ ರವರು ಜನಾಬ್ ಅಬೂಬಕ್ಕರ್ ರೈಸ್ಕೋ ರವರನ್ನು ಹೂ ಗುಚ್ಚ ನೀಡಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಅಬೂಬಕ್ಕರ್ ರೈಸ್ಕೋ ರವರು ರೈಸ್ಕೋ ಗ್ರೂಪ್ ಆಫ್ ಕಂಪನಿ ಸೌದಿ ಅರೇಬಿಯಾದಲ್ಲಿ ನಡೆದು ಬಂದ ದಾರಿಯನ್ನು ಸಭೆಯಲ್ಲಿ ಸವಿಸ್ತಾರವಾಗಿ ವಿವರಣೆ ನೀಡಿದರು ಹಾಗೂ ಮುಂದಿನ ದಿನಗಳಲ್ಲಿ ಕಂಪನಿಯು ಯಾವ ರೀತಿಯಲ್ಲಿ ಕಾರ್ಯಪ್ರವರ್ತನೆ ನಡೆಸುವ ಬಗ್ಗೆ ತಿಳಿಸಿದರು. ಅವರ ಮಾತುಗಳನ್ನು ಕೇಳಿ ಸಭೆಯಲ್ಲಿ ಇದ್ದ ಎಲ್ಲಾರ ಕಣ್ಣುಗಳಲ್ಲಿ ಅವರಿಗೆ ತಿಳಿಯದ ರೀತಿಯಲ್ಲಿ ಆನಂದ ಬಾಷ್ಪ ಹರಡಿತು.


ಕೂನೆಯಲ್ಲಿ ಬರ್ಜರಿ ಭೋಜನೆಯ ನಂತರ ಮೊಹಮ್ಮದ್ ಸಖಾಫಿ ತೆಲಕ್ಕಿ ಉಸ್ತಾದರು ಬೈತ್ ಹಾಡಿದರು. ವೇದಿಕೆಯಲ್ಲಿ ಅಬೂಬಕ್ಕರ್ ರೈಸ್ಕೋ, ಮೊಹಮ್ಮದ್ ಸಖಾಫಿ ತೆಲಕ್ಕಿ, ಫೈನಾನ್ಸ್ ಮೆನೆಜರ್ ಸುಧೀರ್ ಶೆಟ್ಟಿ, ಅಬೂಬಕ್ಕರ್ ಸಿದ್ಧೀಕ್ ಪಡುಬಿದ್ರೆ , ಬದ್ರುದ್ದೀನ್ ಮದ್ದಡ್ಕ ಹಾಗೂ ಹಂಝಾ ಕನ್ನಂಗಾರ್ ಉಪಸ್ತಿತರಿದ್ದರು.
ಕಾರ್ಯಕ್ರಮವನ್ನು ಮೊಹಮ್ಮದ್ ಅಶ್ರಫ್ ನಾವುಂದ ರವರು ನಿರೂಪಿಸಿ
ಕೂನೆಯಲ್ಲಿ ಎಲ್ಲಾರನ್ನು ಧನ್ಯವಾದ ಗೈದರು..

error: Content is protected !! Not allowed copy content from janadhvani.com