janadhvani

Kannada Online News Paper

ಕೆಲಸ ಕಳೆದುಕೊಳ್ಳತ್ತಿರುವ ವಿದೇಶೀ ನೌಕರರು : 2020 ರ ಹೊತ್ತಿಗೆ ದೇಶೀಕರಣ ಯಶಸ್ಸು

ರಿಯಾದ್: ಸೌದಿ ಅರೇಬಿಯಾದಲ್ಲಿ ಈ ವರ್ಷ ಹೆಚ್ಚಿನ ವಿದೇಶಿ ನೌಕರರು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ದೇಶಿಯ ನಾಗರಿಕರ ನಿರುದ್ಯೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪರಿವರ್ತನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಯೋಜನೆಗಳು ಯಶಸ್ಸನ್ನು ಕಾಣಲಿದೆ.

ಸ್ವದೇಶೀಕರಣ ಯೋಜನೆಗಳು ಮತ್ತು ಆರ್ಥಿಕ ನೀತಿಗಳು ಹೆಚ್ಚಿನ ದೇಶೀಯರಿಗೆ ಉದ್ಯೋಗಗಳನ್ನು ಹುಡುಕಲು ಸಹಾಯ ಮಾಡಲಿದೆ. ಇದರ ಜೊತೆಯಲ್ಲಿ, ಲಕ್ಷಾಂತರ ವಿದೇಶಿ ಕೆಲಸಗಾರರು ದೇಶವನ್ನು ತೊರೆಯಲಿದ್ದಾರೆ. ಆದ್ದರಿಂದಲೇ ಸೌದಿ ದೇಶೀಕರಣ ಯೋಜನೆಗಳು 2020 ರ ಹೊತ್ತಿಗೆ ಯಶಸ್ವಿಯಾಗಬಹುದೆಂದು ಅಮೆರಿಕಾದ ಬ್ಲೂಮ್ಬರ್ಗ್ ವಾರ್ತಾ ಸಂಸ್ಥೆ ಅಭಿಪ್ರಾಯ ಪಟ್ಟಿಡಿದೆ.

ತೈಲೇತರ ಆದಾಯವನ್ನು ಹೆಚ್ಚಿಸಲು ಸೌದಿ ಅರೇಬಿಯಾ ದೊಡ್ಡ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದಲ್ಲದೆ, ವಿದೇಶಿ ಕೆಲಸಗಾರರು ತಮ್ಮ ತಾಯ್ನಾಡಿಗೆ ಕಳುಹಿಸುವ ಹಣದ ಪ್ರಮಾಣವನ್ನು ಕಡಿಮೆಗೊಳಿಸಲು ಮತ್ತು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ.

ಮಹಿಳೆಯರಿಗೆ ಚಾಲನಾ ಪರವಾನಿಗೆ ನೀಡಿರುವ ಯೊಜನೆಯು ಆರ್ಥಿಕತೆಯಲ್ಲಿ ಪ್ರತಿಫಲಿಸಲಿದೆ ಎಂದು ನಂಬಲಾಗಿದೆ.ಕೈಗಾರಿಕಾ ಮತ್ತು ವಾಣಿಜ್ಯ ರಂಗದಲ್ಲಿ ಕ್ಷೀಣತೆ ಕಂಡುಬಂದರೂ ಸಾಗರೋತ್ತರ ಕೆಲಸಗಾರರಿಗೆ ವಿಧಿಸಲಾಗುವ ಲೆವಿ, ಮುಂದಿನ ವರ್ಷದಿಂದ 600 ರಿಯಾಲ್‌ಗೆ ಏರಿಸಲಾಗುತ್ತದೆ.

ದೇಶೀಯರಿಗೆ ಇದು ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ವಿದೇಶಿ ಕೆಲಸಗಾರರಿಂದ ಉದ್ಯೋಗ ಹುಡುಕುವವರ ಸಂಖ್ಯೆಯನ್ನು ಕಡಿತಗೊಳಿಸುವಲ್ಲಿ ದೇಶೀಕರಣ ಮತ್ತು ಲೆವಿ ಹೇರಿಕೆಯು ಕಾರಣವಾಗಿದೆ. ಮಾತ್ರವಲ್ಲದೆ ಸೌದಿ ಅರೇಬಿಯಾದಲ್ಲಿ 15 ತಿಂಗಳುಗಳಲ್ಲಿ 7 ಲಕ್ಷ ವಿದೇಶಿ ಕೆಲಸಗಾರರು  ಹಿಂದಿರುಗಿದ್ದು ದೇಶದ ಆರ್ಥಿಕತೆಗೆ ಪ್ರಯೋಜನವನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.

error: Content is protected !! Not allowed copy content from janadhvani.com