janadhvani

Kannada Online News Paper

SSF ರಾಜ್ಯ ಮಟ್ಟದ ” ನಮ್ಮ ಮಕ್ಕಳು ನಮ್ಮವರಾಗಲು” ಅಭಿಯಾನಕ್ಕೆ ವಿದ್ಯುಕ್ತ ಚಾಲನೆ

ತುಮಕೂರು: (ಜನಧ್ವನಿ ವಾರ್ತೆ)  ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೆಶನ್ ರಾಜ್ಯದಾದ್ಯಂತ ಹಮ್ಮಿಕೊಂಡ ಸೆಕ್ಟರ್ ಮಟ್ಟದ ”ನಮ್ಮ ಮಕ್ಕಳು ನಮ್ಮವರಾಗಲು ” ಅಭಿಯಾನಕ್ಕೆ ತುಮಕೂರಿನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
SSF ರಾಜ್ಯಾಧ್ಯಕ್ಷರಾದ. ಇಸ್ಮಾಈಲ್ ಸಖಾಫಿ ಕೊಂಡಂಗೇರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ವನ್ನು ರಾಜ್ಯ ಉಪಾಧ್ಯಕ್ಷ ಉಮರ್ ಅಸ್ಸಖಾಫ್ ಸಿ.ಟಿ.ಎಂ.ತಂಙಳ್ ಉದ್ಘಾಟಿಸಿದರು. ದೇಶದಾದ್ಯಂತ ಮಕ್ಕಳ ಮೇಲೆ ಅತ್ಯಾಚಾರ ಹಲ್ಲೆಗಳು ನಡೆಯುತ್ತಿರುವುದು ಖಂಡನೀಯ. ಅವರಿಗೆ ಸಂಪೂರ್ಣ ರಕ್ಷಣೆ ಮತ್ತು ನೈತಿಕ ಶಿಕ್ಷಣವನ್ನೂ ನೀಡುವ ಮೂಲಕ ಸದ್ರಢ ಸಮಾಜವನ್ನು ರೂಪಿಸಬೇಕಿದೆ. ಮಕ್ಕಳ ದಾರಿತಪ್ಪಿಸುತ್ತಿರುವ ಮಾದಕ ವಸ್ತುಗಳು, ಫೆಸ್ ಬುಕ್ ಮುಂತಾದ ಜಾಲತಾಣಗಳತ್ತ ಆಕರ್ಷಿಸಲ್ಪಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳೇ ಅನ್ಯರಾಗುವ ಭೀತಿಯಿದೆ. ಇದರಿಂದ ನಮ್ಮ ಮಕ್ಕಳನ್ನು ಸಂರಕ್ಷಿಸಬೇಕು ಎಂದು ಅವರು ಕರೆ ನೀಡಿದರು.


ರಾಜ್ಯ ಕಾರ್ಯದರ್ಶಿ ಸುಫ್ಯಾನ್ ಸಖಾಫಿ, ನಾಯಕ ಮುಸ್ತಫಾ ನ ಈಮೀ, ಆರಿಫ್ ರಝಾ ತುಮಕೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ನಾಯಕರಾದ ಹಸೈನಾರ್ ಆನೆಮಹಲ್, ಶಾಹುಲ್ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ,ಅಬ್ದುಲ್ ರಹಮಾನ್ ಸುಳ್ಯ, ತುಮಕೂರು ಜಿಲ್ಲಾಧ್ಯಕ್ಷ ಅಸ್ಲಂ ಖಾನ್ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com