ಕುಂಬ್ರದ ಮಣ್ಣಿನಲ್ಲಿ ಮುಳಕೆಯೊಡೆದು, ಜನರ ಪ್ರೀತಿ-ವಿಶ್ವಾಸವನ್ನು ಸಂಪಾದಿಸಿಕೊಂಡು ಯಶಸ್ವಿಯಾಗಿ ಹತ್ತನೇ ವರ್ಷದ ಸಂಭ್ರಮದಲ್ಲಿರುವ ಇಂಡಿಯನ್ ಇವೆಂಟ್ ಆ್ಯಂಡ್ ವೆಡ್ಡಿಂಗ್ಸ್ ಶಾಮಿಯಾನ ಸಂಸ್ಥೆಯ ಗೋಡೌನ್‌ಗೆ ಇಂದು ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ, ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಧಾರ್ಮಿಕ ಪ್ರಭಾಷಕ ಉಸ್ತಾದ್ ಸಿರಾಜುದ್ದೀನ್ ಖಾಸಿಮಿ (ಪತ್ತಾನಾಪುರಂ, ಕೇರಳ) ಭೇಟಿ ನೀಡಿ ಸಂಸ್ಥೆಯ ಬೆಳವಣಿಗೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಪಾಲುದಾರ ಇಕ್ಬಾಲ್ ಬಾಳಿಲ, “ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಸಿರಾಜುದ್ದೀನ್ ಖಾಸಿಮಿ ಉಸ್ತಾದರು ನಮ್ಮ ಸಂಸ್ಥೆಗೆ ಭೇಟಿ ನೀಡಿರುವುದು ನಮಗೆ ಅಪಾರ ಸಂತೋಷದ ವಿಷಯ. ಅವರ ದುಆ ಮತ್ತು ಮಾರ್ಗದರ್ಶನ ಸದಾ ನಮ್ಮೊಂದಿಗೆ ಇರಲಿ” ಎಂದು ಹಾರೈಸಿದರು.
ಬಳಿಕ ಉಸ್ತಾದ್ ಸಿರಾಜುದ್ದೀನ್ ಖಾಸಿಮಿ ಅವರನ್ನು ಕುಂಬ್ರದ ಹಿರಿಯ ಸಮಾಜಮುಖಿ ನಾಯಕ ಅಬ್ದುಲ್ ರಹ್ಮಾನ್ ಹಾಜಿ ಅರ್ಯಡ್ಕ ಅವರು ಶಾಲು ಹೊದಿಸಿ ಗೌರವಿಸಿದರು. ಉಸ್ತಾದರೊಂದಿಗೆ ಆಗಮಿಸಿದ್ದ ಖ್ಯಾತ ವಾಗ್ಮಿ ಅಬ್ರಾರಿ ಉಸ್ತಾದ್ ಅವರನ್ನೂ ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪಾಲುದಾರ ಮುಕ್ತಾರ್ ಕುಂಬ್ರ, ಉದ್ಯಮಿ ಶರಫುದ್ದೀನ್ ಕುಂಬ್ರ, ಮ್ಯಾನೇಜ್ಮೆಂಟ್ ತಂಡದ ನಿಝಾಮುದ್ದೀನ್ ಬಾಳಿಲ, ಅಶ್ರಫ್ ಸನ್ ಶೖನ್ ಕುಂಬ್ರ ಸೇರಿದಂತೆ ಹಲವಾರು ಗಣ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಹತ್ತನೇ ವರ್ಷದ ಸಂಭ್ರಮದಲ್ಲಿರುವ ಇಂಡಿಯನ್ ಇವೆಂಟ್ ಆ್ಯಂಡ್ ವೆಡ್ಡಿಂಗ್ಸ್ ಸಂಸ್ಥೆಯ ಮುಂದಿನ ಪಯಣ ಇನ್ನಷ್ಟು ಯಶಸ್ವಿಯಾಗಲಿ ಎಂದು ಉಸ್ತಾದರು ದುವಾ ನೆರವೇರಿಸಿ ಶುಭ ಹಾರೈಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ