ಬಾಗ್ದಾದ್: ಅಮೆರಿಕ ವಾಯುಪಡೆಗೆ ಸೇರಿದ ಹಾರುವ ಇಂಧನ ಟ್ಯಾಂಕರ್ ಎಂದೇ ಕರೆಯಲ್ಪಡುವ ಬೋಯಿಂಗ್ ಕೆ.ಸಿ-135 ಸ್ಟ್ರಾಟೋಟ್ಯಾಂಕರ್ (Boeing KC-135 Stratotanker) ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾಕ್ನ ಇರಾನ್ ಪರ ಸಶಸ್ತ್ರ ಗುಂಪು ‘ಇಸ್ಲಾಮಿಕ್ ರೆಸಿಸ್ಟೆನ್ಸ್’ ಘೋಷಿಸಿದೆ.
ಗುರುವಾರ ನಡೆದ ಈ ಕಾರ್ಯಾಚರಣೆಯು ದೇಶದ ಸಾರ್ವಭೌಮತ್ವ ಮತ್ತು ವಾಯುಪ್ರದೇಶವನ್ನು ರಕ್ಷಿಸುವ ಸಲುವಾಗಿ ನಡೆಸಿದ ‘ವಾಯುಪ್ರತಿರೋಧ’ ಕ್ರಮವಾಗಿದೆ ಎಂದು ಸಶಸ್ತ್ರ ಗುಂಪು ಪ್ರಕಟಣೆಯಲ್ಲಿ ತಿಳಿಸಿದೆ. ಈ ಪತನದಲ್ಲಿ ವಿಮಾನದಲ್ಲಿದ್ದ ಆರು ಮಂದಿ ವಾಯುಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಈ ಗುಂಪು ಪ್ರತಿಪಾದಿಸಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ವಿಮಾನ ಪತನವಾಗಿರುವುದನ್ನು ಖಚಿತಪಡಿಸಿದೆಯಾದರೂ, ಸಶಸ್ತ್ರ ಗುಂಪಿನ ದಾಳಿಯನ್ನು ನಿರಾಕರಿಸಿದೆ. ಶತ್ರುಗಳ ದಾಳಿಯಿಂದಾಗಲಿ ಅಥವಾ ತಾಂತ್ರಿಕವಾಗಿ ಸಂಭವಿಸುವ ‘ಸೌಹಾರ್ದ ಗುಂಡಿನ ದಾಳಿ’ಯಿಂದಾಗಲಿ (Friendly fire) ಈ ಅವಘಡ ಸಂಭವಿಸಿಲ್ಲ ಎಂದು ಸೆಂಟ್ಕಾಮ್ ಹೇಳಿದೆ.
ವಿಮಾನ ಪತನಕ್ಕೆ ನಿಖರವಾದ ಕಾರಣವೇನು ಎಂಬ ಬಗ್ಗೆ ಅಮೆರಿಕ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಸದ್ಯ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ.
ಕೂದಲೆಳೆ ಅಂತರದಲ್ಲಿ ಪಾರಾದ ಮತ್ತೊಂದು ವಿಮಾನ:
ದುರಂತದ ಸಮಯದಲ್ಲಿ ಕೆ.ಸಿ-135 ವಿಮಾನದಿಂದ ಇಂಧನ ತುಂಬಿಸಿಕೊಳ್ಳಲು ಮತ್ತೊಂದು ಯುದ್ಧ ವಿಮಾನವು ಹತ್ತಿರದಲ್ಲೇ ಇತ್ತು. ಅದೃಷ್ಟವಶಾತ್ ಆ ವಿಮಾನವು ಯಾವುದೇ ಹಾನಿಯಿಲ್ಲದೆ ಇಸ್ರೇಲ್ನಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಮಿಲಿಟರಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮಾಹಿತಿ: ಬೋಯಿಂಗ್ ಕೆ.ಸಿ-135 ಸ್ಟ್ರಾಟೋಟ್ಯಾಂಕರ್ ವಿಮಾನಗಳು ಯುದ್ಧ ವಿಮಾನಗಳು ಸುದೀರ್ಘ ಕಾಲ ಹಾರಾಟ ನಡೆಸಲು ಅನುಕೂಲವಾಗುವಂತೆ ಆಕಾಶದಲ್ಲೇ ಇಂಧನವನ್ನು ಮರುಪೂರಣ ಮಾಡುವ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿರುತ್ತವೆ.
















ಇನ್ನಷ್ಟು ಸುದ್ದಿಗಳು
ಇರಾನ್ ಮೇಲೆ ಮತ್ತೆ ಯುಎಸ್ ದಾಳಿ; ಬಂದರ್ ಅಬ್ಬಾಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಬಾಂಬ್ ದಾಳಿ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ
ವಿಕಾಸದ ಕೂಗಿನೊಂದಿಗೆ ಇತ್ತಿಹಾದ್ ರೈಲು; ಟಿಕೆಟ್ ದರ ಮತ್ತು ರಿಯಾಯಿತಿಗಳ ಘೋಷಣೆ
ಯುಎಇ: ಮುಂದುವರಿದ ಭಾರತೀಯ ಪಾಸ್ಪೋರ್ಟ್ ಸೇವಾ ಬಿಕ್ಕಟ್ಟು
ಇತ್ತಿಹಾದ್ ರೈಲಿಗೆ ಐತಿಹಾಸಿಕ ಕ್ಷಣ; ಭವ್ಯ ಆರಂಭಕ್ಕೆ ಯುಎಇನಲ್ಲಿ ಅಭೂತಪೂರ್ವ ಜನಸ್ಪಂದನ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ದಾಳಿಗಳು ಮುಂದುವರಿದರೆ ‘ನರಕಸದೃಶ’ ತಿರುಗೇಟು ನೀಡಲಾಗುವುದು- ಇರಾನ್ ಎಚ್ಚರಿಕೆ
ಮತ್ತೆ ಯುದ್ಧವೇ? – ಎರಡನೇ ದಿನವೂ ಇರಾನ್ ಮೇಲೆ ಯುಎಸ್ ದಾಳಿ
ಬಹ್ರೇನ್ ಮೇಲೆ ಇರಾನ್ ಡ್ರೋನ್ ದಾಳಿ: ಸೌದಿ ಅರೇಬಿಯಾ ತೀವ್ರ ಖಂಡನೆ- ಪೂರ್ಣ ಬೆಂಬಲ ಘೋಷಣೆ