ದೇರಳಕಟ್ಟೆ: ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ 1500 ನೇ ಜನ್ಮ ವರ್ಷಕ್ಕೆ ಸ್ವಾಗತ ಕೋರಿ ಮಂಜನಾಡಿ ಅಲ್ ಮದೀನ ಸಂಸ್ಥೆಯ ವತಿಯಿಂದ ಇದೇ ಬರುವ ಆಗಸ್ಟ್ 22 ರಂದು ಶುಕ್ರವಾರ, ಅಪರಾಹ್ನ: 3:30ಕ್ಕೆ ದೇರಳಕಟ್ಟೆ ಸರ್ಕಲ್ ನಿಂದ- ನಾಟೆಕಲ್ ಸರ್ಕಲ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿದೆ.
ಸಾಮಾಜಿಕ, ಧಾರ್ಮಿಕ ಹಾಗೂ ಸ್ಥಳೀಯ ಮುಖಂಡರ ಸಹಭಾಗಿತ್ವದಲ್ಲಿ ಈ ರ‌್ಯಾಲಿ ನಡೆಯಲಿದೆ. ಜಾಥಾದ ಪೂರ್ವ ಸಿದ್ಧತೆಗಾಗಿ ಪ್ರತ್ಯೇಕ ಸ್ವಾಗತ ಸಮಿತಿ ರಚನಾ ಸಭೆಯು ದೇರಳಕಟ್ಟೆ ತಾಜುಲ್ ಉಲಮಾ ಮಸ್ಜಿದ್ ನಲ್ಲಿ ಕಳೆದ ಆಗಸ್ಟ್ 14 ರಂದು ನಡೆಯಿತು. ಈ ಸಂದರ್ಭದಲ್ಲಿ ರಚಿಸಲಾದ ಸ್ವಾಗತ ಸಮಿತಿಯ ಚೆಯರ್ಮಾನ್ ಆಗಿ ಏಷಿಯನ್ ಬಾವ ಹಾಜಿ, ಕನ್ವೀನರ್ ಆಗಿ ಮಹಬೂಬ್ ಸಖಾಫಿ, ವೈಸ್ ಕನ್ವೀನರ್ ಆಗಿ ಸಿದ್ದೀಕ್ ಹಾಜಿ, ಫೈನಾನ್ಶಿಯಲ್ ಸೆಕ್ರೆಟರಿಯಾಗಿ ನಾಸಿರ್ ಹಾಜಿ, ಲಾ ಆಂಡ್ ಆರ್ಡರ್ ನ ಮುಖ್ಯಸ್ಥರಾಗಿ ಶೌಕತ್ ಹಾಜಿ, ಸಂಚಾಲಕರಾಗಿ ಶಮೀರ್ ದೇರಳಕಟ್ಟೆ ಆಯ್ಕೆಯಾದರು.
ಹಾಗೂ ಇದರ ಸದಸ್ಯರಾಗಿ ಅಮ್ಮಿ ಹಾಜಿ, ಬಶೀರ್ ಹಾಜಿ, ಸುಲೈಮಾನ್ ಹಾಜಿ, ಗುಡ್ ಲಕ್ ಕಬೀರ್ ಹಾಜಿ, ಅಶ್ರಫ್ ಹಾಜಿ, ರಝ್ವಿ ಉಸ್ತಾದ್, ಝಿರಾರ್ ಅಬ್ದುಲ್ಲ, ಹಬೀಬ್ ಸಖಾಫಿ, ಸ್ವಾದಿಕ್ ಗುಡ್ ಲಕ್ ಮುಂತಾದವರನ್ನು ಆರಿಸಲಾಯಿತು. ಅಲ್ ಮದೀನ ಆಡಳಿತ ಸಮಿತಿ ಸದಸ್ಯರಾದ ಎನ್ ಎಸ್ ಅಬ್ದುಲ್ಲ, ಮುಹಮ್ಮದ್ ಕುಂಞಿ ಅಮ್ಜದಿ, ಅಮ್ಜದಿ, ಅಬುಸಾಲಿಹ್ ಅಝ್ಹರಿ, ಅಧ್ಯಾಪಕರಾದ ಸಯ್ಯಿದ್ ಉವೈಸ್ ತಂಙಳ್, ಮನ್ಸೂರ್ ಹಿಮಮಿ, ಇಕ್ಬಾಲ್ ಮರ್ಝೂಕಿ, ಸಲಾಂ ಅಹ್ಸನಿ, ಹಾಫಿಲ್ ಮರ್ಸದ್, ಝೈನುಲ್ ಆಬಿದ್ ಸಖಾಫಿ ಉಪಸ್ಥಿತರಿದ್ದರು
ಪ್ರವಾದಿ ಸಂದೇಶವನ್ನು ಸಾರುವ ಮಹತ್ವಪೂರ್ಣವಾದ ಈ ಜಾಥಾದಲ್ಲಿ ಸರ್ವ ಸಂಘಟನೆಯ ನಾಯಕರು, ಕಾರ್ಯಕರ್ತರು ಹಾಗೂ ಪ್ರವಾದಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ