ಕೋಝಿಕ್ಕೋಡ್ | ಇಸ್ರೇಲಿ ದೌರ್ಜನ್ಯಕ್ಕೆ ಬಲಿಯಾದ ಗಾಝಾ ನಿವಾಸಿಗಳ ಯೋಗಕ್ಷೇಮಕ್ಕಾಗಿ ಮತ್ತು ಶಾಂತಿ ಮರುಸ್ಥಾಪನೆಗಾಗಿ, ಸೋಮವಾರ ಸುನ್ನತ್ ಉಪವಾಸ ಆಚರಿಸಲು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕರೆ ನೀಡಿದ್ದಾರೆ. ಸೋಮವಾರ ಮಗ್ರಿಬ್ ನಮಾಜ್ ನಂತರ, ಎಲ್ಲರೂ ತಮ್ಮ ಕುಟುಂಬ ಸದಸ್ಯರೊಂದಿಗೆ ಒಟ್ಟುಗೂಡಿ ವಿಶೇಷ ಪ್ರಾರ್ಥನೆ ನಡೆಸಬೇಕೆಂದು ಕಾಂತಪುರಂ ಉಸ್ತಾದರು ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿನಂತಿಸಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನ ಪೂರ್ಣ ರೂಪ
الشيخ أبوبكر أحمد
ಗಾಝಾ ವಶಪಡಿಸಿಕೊಳ್ಳುವ ಯೋಜನೆಗೆ ಇಸ್ರೇಲ್ ಭದ್ರತಾ ಕ್ಯಾಬಿನೆಟ್ ಅನುಮತಿ ನೀಡಿದೆಯೆಂಬ ಸುದ್ದಿ ನೋಡಿದೆ. ಗಾಝಾ ದಲ್ಲಿ ವಂಶಹತ್ಯೆಯ ಯೋಜನೆ ಜಾರಿಗೆ ತಂದು, ಝಿಯೋನಿಸ್ಟ್ ಸೇನೆ ಈಗ ಮುನ್ನಡೆಯುತ್ತಿದೆ. ಪ್ರತಿ ಕ್ಷಣವೂ ಹಸಿವಿನ ಮರಣವೇದನೆಯಲ್ಲಿ ಕಿರುಚುವ ಗಾಝಾದ ಮಕ್ಕಳ ಚಿತ್ರಗಳು ಕಣ್ಮುಂದಿನಿಂದ ಮಾಯವಾಗುತ್ತಿಲ್ಲ.
ಎಲ್ಲಾ ಅಂತರರಾಷ್ಟ್ರೀಯ ಮಾನದಂಡಗಳನ್ನು, ಮಾನವೀಯ ಮೌಲ್ಯಗಳನ್ನು ಹಾಗೂ ಒಪ್ಪಂದಗಳನ್ನು ಉಲ್ಲಂಘಿಸಿ ಕಳೆದ 22 ತಿಂಗಳಿನಿಂದ ಇಸ್ರೇಲ್ ಗಾಝಾದಲ್ಲಿ ಮುಂದುವರಿಸ್ಸುತ್ತಿರುವ ಹತ್ಯಾಕಾಂಡ ಮತ್ತು ನಿರ್ಬಂಧದಿಂದ ಇಂದಿನವರೆಗೆ 65,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ಹೇಳುತ್ತವೆ. ಮಹಿಳೆಯರು ಮತ್ತು ಮಕ್ಕಳು ಸೇರಿ ಈ ತನಕ 193 ಮಂದಿ ಹಸಿವಿನಿಂದ ಮೃತಪಟ್ಟಿದ್ದಾರೆ.
ಯಾವುದೇ ಕಾರಣಕ್ಕೂ ಸಮರ್ಥಿಸಲಾಗದ ವಂಶಹತ್ಯೆಯೇ ಗಾಝಾ ದಲ್ಲಿ ನಡೆಯುತ್ತಿದೆ. ಎಲ್ಲವನ್ನೂ ಕಳೆದುಕೊಂಡು ಶಿಬಿರಗಳಲ್ಲಿ ವಾಸಿಸುವವರ ಮೇಲೆ, ಹಸಿವಿನಿಂದ ಬಳಲಿ ಸ್ವಯಂ ಸೇವಾ ಸಂಸ್ಥೆಗಳು ಹಂಚುವ ಅತ್ಯಲ್ಪ ಆಹಾರದ ಪೊಟ್ಟಣಕ್ಕಾಗಿ ಕಾಯುತ್ತಾ ಸರದಿ ನಿಂತವರ ಮೇಲೆಯೂ ಗುಂಡು ಹಾರಿಸುವ ಇಸ್ರೇಲ್ ಆಕ್ರಮಣಕಾರರ ಕ್ರೂರ ಮನಸ್ಥಿತಿ ಲೋಕಕ್ಕೆ ಮನವರಿಕೆ ಮಾಡುತ್ತಿದೆ.
ನಮಗೆ ಲಭಿಸುವ ಚಿತ್ರಗಳು ಮತ್ತು ಸುದ್ದಿಗಳಿಗಿಂತಲೂ ಭೀಕರವಾಗಿದೆ ಅಲ್ಲಿ ನಡೆಯುತ್ತಿರುವುದು. ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಜನಸಂಖ್ಯೆಯ 81% ಜನರು ಆಹಾರ ಸೇವನೆಯಲ್ಲಿ ಅತ್ಯಂತ ಕೆಳಮಟ್ಟದಲ್ಲಿದ್ದಾರೆ. ಹತ್ತರಲ್ಲಿ ಒಂಬತ್ತು ಕುಟುಂಬಗಳು ಒಂದು ಹೊತ್ತಿನ ಊಟ ಸಿಗಲು ದಿನವಿಡೀ ಹರಸಾಹಸ ಪಡುತ್ತಿವೆ. ಹೃದಯವೇ ಒಡೆದು ಚೂರಾಗುವಂತಹ ಗಾಯಗಳ ದೇಶವಾಗಿ ಅದು ಮಾರ್ಪಟ್ಟಿದೆ. ತಮ್ಮ ಜನ್ಮಭೂಮಿಯಲ್ಲೇ ನಿರಾಶ್ರಿತರಾಗಿ ಹೊಟ್ಟೆ ಗೆ ಒಂದು ತುತ್ತು ಆಹಾರವಿಲ್ಲದೆ ದಯನೀಯವಾಗಿ ಅವರು ನಮ್ಮ ಕಡೆ ನೋಡುತ್ತಿದ್ದಾರೆ.
ಮಾನವೀಯ ದೃಷ್ಟಿಯಿಂದಲೂ, ಒಬ್ಬ ವಿಶ್ವಾಸಿಯಾಗಿ ನಮಗೆ ಕೆಲವು ಕರ್ತವ್ಯಗಳಿವೆ. ಅವರು ನಮ್ಮ ಸಹೋದರರು. ಅವರನ್ನು ನೆನೆಯುವಾಗ ಕಣ್ಣೀರು ತುಂಬುತ್ತದೆ. ಅವರಿಗಾಗಿ ನಾವು ಪ್ರತಿಯೊಬ್ಬರೂ ಇನ್ನೂ ಹೆಚ್ಚು ಹೃದಯ ತುಂಬಿ ಕಣ್ಣೀರು ಸುರಿಸಿ ರಬ್ಬಿನೊಂದಿಗೆ ಪ್ರಾರ್ಥಿಸಬೇಕಾಗಿದೆ.
ಗಾಝಾ ನಿವಾಸಿಗಳ ಯೋಗಕ್ಷೇಮಕ್ಕಾಗಿ ಮತ್ತು ಶಾಂತಿ ಮರುಸ್ಥಾಪನೆಗಾಗಿ, ಬರುವ ಸೋಮವಾರ (11-08-25) ಮಗ್ರಿಬ್ ನಮಾಝ್ ನಂತರ ನಿಮ್ಮ ಕುಟುಂಬ ಸದಸ್ಯರೊಂದಿಗೆ ಸೇರಿ ವಿಶೇಷ ಪ್ರಾರ್ಥನೆ ನಡೆಸಬೇಕೆಂದು ಎಲ್ಲರೊಂದಿಗೂ ವಿನಂತಿಸುತ್ತೇನೆ. ಪ್ರಾರ್ಥನೆಗೆ ಮುನ್ನ ಸತ್ಕಾರ್ಯಗಳನ್ನು ಮಾಡುವುದೇ ಅದರ ಸ್ವೀಕಾರಾರ್ಹತೆಯ ಮಾನದಂಡವಾಗಿರುವುದರಿಂದ ಸೋಮವಾರ ದಿವಸ ಸುನ್ನತ್ ಉಪವಾಸ ಪಾಲಿಸುವಂತೆಯೂ ನೆನಪಿಸುತ್ತೇನೆ.
ಪ್ಯಾಲಸ್ತೀನ್ ಜನತೆಗೆ ಶೀಘ್ರವೇ ಶಾಂತಿಯ ಜೀವನ ದೊರಕಲಿ.
ಶೈಖ್ ಅಬೂಬಕರ್ ಅಹ್ಮದ್ ಅವರ ಫೇಸ್‌ಬುಕ್ ಪುಟದಿಂದ
Date : 09/08/2025
https://www.facebook.com/share/p/19LE7yPw7P/
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ