ಮಸ್ಕತ್ : ಕೆ.ಸಿ.ಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್ ﷺ ರವರ 1500ನೇ ಜನ್ಮದಿನಾಚರಣೆಯ ಪ್ರಯುಕ್ತ, 2025ರ ಸೆಪ್ಟೆಂಬರ್ 19ರಂದು (ಶುಕ್ರವಾರ) ಗೊಲ್ಡನ್ ತುಲಿಪ್ ರುವಿ ಸಭಾಂಗಣದಲ್ಲಿ ನಡೆಯಲಿರುವ “ಪ್ರವಾದಿ ﷺ ಕಾಲಾತೀತ ಮಾರ್ಗದರ್ಶಿ” ಎಂಬ ಶೀರ್ಷಿಕೆಯ ಬೃಹತ್ ಮಿಲಾದ್ ಸಮಾವೇಶದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಇತ್ತೀಚೆಗೆ ಸೀಬ್ ಮದರಸ ಸಭಾಂಗಣದಲ್ಲಿ ನಡೆದ ಸ್ವಾಗತ ಸಮಿತಿ ರಚನಾ ಸಭೆಯು ಕೆ.ಸಿ.ಎಫ್ ಒಮಾನ್ ಅಧ್ಯಕ್ಷ ಹಂಝ ಹಾಜಿ ಕನ್ನಂಗಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಗೆ ಕೆ.ಸಿ.ಎಫ್ ಒಮಾನ್ ಶಿಕ್ಷಣ ವಿಭಾಗದ ಅಧ್ಯಕ್ಷ ಉಬೈದುಲ್ಲಾ ಸಖಾಫಿ ಮಿತ್ತೂರು ದುಆದೊಂದಿಗೆ ಚಾಲನೆ ನೀಡಿದರು. ಬಳಿಕ, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಇಹ್ಸಾನ್ ವಿಭಾಗದ ಚೆಯರ್ಮನ್ ಅಯ್ಯೂಬ್ ಕೋಡಿ ಸಭೆಯನ್ನು ಉದ್ಘಾಟಿಸಿದರು.
ಈ ಬೃಹತ್ ಸಮಾವೇಶದ ಸ್ವಾಗತ ಸಮಿತಿಗೆ ಕೆಳಕಂಡವರನ್ನು ನೇಮಕ ಮಾಡಲಾಯಿತು:
• ಚೆಯರ್ಮನ್: ಆಬಿದ್ ಪಾಶ ಬಾಳೆಹೊನ್ನೂರ್ (ಒವೈಸ್ ಇಂಟರ್ನ್ಯಾಶನಲ್)
ವರ್ಕಿಂಗ್ ಚೇರ್ಮನ್: ಅಯ್ಯೂಬ್ ಕೋಡಿ
• ಜನರಲ್ ಕನ್ವೀನರ್: ಸಯ್ಯದ್ ಆಬಿದ್ ತಂಙಲ್ ಎಮ್ಮೆಮಾಡು
• ಫಿನಾನ್ಸಿಯಲ್ ಕಂಟ್ರೋಲರ್: ಹಸೀಫ್ ಇಕ್ಬಾಲ್ ಕಂದಾವರ
• ಸಹ ಕನ್ವೀನರ್‌ಗಳು: ಹನೀಫ್ ಮನ್ನಾಪು, ಲತೀಫ್ ಮಂಜೇಶ್ವರ
• ಫೈನಾನ್ಸಿಯಲ್ ಕನ್ವೀನರ್‌ಗಳು: ಉಮರ್ ಸಖಾಫಿ ಎಡಪ್ಪಾಲ, ಆರಿಫ್ ಕೋಡಿ ಮತ್ತು 101 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ಪಾಲೆತಡ್ಕ, ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಇಬ್ರಾಹಿಂ ಹಾಜಿ ಅತ್ರಾಡಿ, ರಾಷ್ಟ್ರೀಯ ಸಮಿತಿ ನಾಯಕರಾದ ಸ್ವಾದಿಕ್ ಹಾಜಿ ಸುಳ್ಯ, ಝುಬೈರ್ ಸಅದಿ, ಹಾರಿಸ್ ಕೊಳಕೇರಿ, ಆದಂ ಮದನಿ, ಹುಸೈನ್ ತೀರ್ಥಹಳ್ಳಿ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.
ಸ್ವಾಗತ ಸಮಿತಿ ಕನ್ವೀನರ್ ಲತೀಫ್ ಮಂಜೇಶ್ವರ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಹೇಳಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ