ಮಂಗಳೂರು : ಎಸ್.ವೈ.ಎಸ್ ರಾಜ್ಯ ಸಮಿತಿಯು ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಘೋಷಣೆಯೊಂದಿಗೆ ಜುಲೈ 14,15,16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ನಡೆಯುವ ಸೌಹಾರ್ದ ಸಂಚಾರವು ದ.ಕ ವೆಸ್ಟ್ ಜಿಲ್ಲೆಯಲ್ಲಿ ಜುಲೈ 15 ಮಂಗಳವಾರ ನಡೆಯಲಿದೆ.
ಬೆಳಿಗ್ಗೆ 7:30 ಕ್ಕೆ ಕನ್ನಂಗಾರ್ ದರ್ಗಾ ಝಿಯಾರತ್ ನೊಂದಿಗೆ ಆರಂಭವಾಗುವ ಎರಡನೇ ದಿನದ ಸೌಹಾರ್ದ ಸಂಚಾರವು ಬೆಳಿಗ್ಗೆ 8:00 ಗಂಟೆಗೆ ಬಪ್ಪನಾಡುನಿಂದ ಸೌಹಾರ್ದ ಕಾಲ್ನಡಿಗೆ ಜಾಥಾವು ಮುಲ್ಲಿ ತನಕ ಬಂದು,ಮುಲ್ಕಿಯಲ್ಲಿ ಸಂದೇಶ ಭಾಷಣ ನಡೆಯಲಿದೆ.
ಬೆಳಿಗ್ಗೆ 9:00 ಗಂಟೆಗೆ ಗೋವಿಂದದಾಸ್ ಕಾಲೇಜು ಕಡೆಯಿಂದ ಸುರತ್ಕಲ್ ಜಂಕ್ಷನ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು,ಸುರತ್ಕಲ್ ಜಂಕ್ಷನ್ ನಲ್ಲಿ ಸಂದೇಶ ಭಾಷಣ ನಡೆಯಲಿದೆ.
ಬೆಳಿಗ್ಗೆ 11:00 ಗಂಟೆಗೆ ಬಾವುಟಗುಡ್ಡೆಯಿಂದ ಕ್ಲಾಕ್ ಟವರ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು, ಕ್ಲಾಕ್ ಟವರ್ ನಲ್ಲಿ ಸಂದೇಶ ಭಾಷಣ ನಡೆಯಲಿದೆ.
ಮದ್ಯಾಹ್ನ 2:00 ಗಂಟೆಗೆ ಅರ್ಕುಳದಿಂದ ಪರಂಗಿಪೇಟೆ ತನಕ ಸೌಹಾರ್ದ ಸಂಚಾರ ಜಾಥಾವು ಬಂದು, ಪರಂಗಿಪೇಟೆ ಜಂಕ್ಷನ್ ನಲ್ಲಿ ಸಂದೇಶ ಬಾಷಣ ನಡೆಯಲಿದೆ.
ಸಂಜೆ 4:00 ಗಂಟೆಗೆ ಕೈಕಂಬದಿಂದ ಬಿಸಿರೋಡ್ ತಾಲೂಕು ಕಛೇರಿ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು, ತಾಲೂಕು ಕಛೇರಿ ಮುಂಭಾಗದಲ್ಲಿ ಸಂದೇಶ ಭಾಷಣ ನಡೆಯಲಿದೆ.
ಸಂಜೆ 5:00 ಗಂಟೆಗೆ ಕಲ್ಲಡ್ಕ ಕೆಸಿರೋಡ್ ನಿಂದ ಕಲ್ಲಡ್ಕ ಜಂಕ್ಷನ್ ತನಕ ಸೌಹಾರ್ದ ಕಾಲ್ನಡಿಗೆ ಜಾಥಾವು ಬಂದು ಕಲ್ಲಡ್ಕ ಜಂಕ್ಷನ್ ನಲ್ಲಿ ಸಂದೇಶ ಭಾಷಣ ನಡೆಯಲಿದೆ.
ಈ ಸೌಹಾರ್ದ ಸಂಚಾರದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು,ಕ್ರೈಸ್ತ ಧರ್ಮ ಗುರುಗಳು,ಮುಸ್ಲಿಂ ಧಾರ್ಮಿಕ ನಾಯಕರು,ಹಿಂದು,ಮುಸ್ಲಿಂ,ಕ್ರೈಸ್ತ ಬಾಂಧವರು,ಸಾಮಾಜಿಕ,ಶೈಕ್ಷಣಿಕ ನಾಯಕರು,ಸೌಹಾರ್ದತೆಯ ಸಂದೇಶವನ್ನು ಸಾರುತ್ತಾ ಸ್ನೇಹದ,ಪ್ರೀತಿಯ,ಸಹಬಾಳ್ವೆಯ ದಿಟ್ಟ ಹೆಜ್ಜೆಗಳನ್ನು ಇಟ್ಟು ಮಾನವೀಯತೆಯ ಸಂದೇಶವನ್ನು ಮನುಕುಲಕ್ಕೆ ನೀಡಲಿದ್ದಾರೆ ಎಂದು ಎಸ್.ವೈ.ಎಸ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ