ದಮಾಮ್: ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ (ಕೆಎಂವೈಎ) ದಮ್ಮಾಂ, ಸೌದಿ ಅರೇಬಿಯದಲ್ಲಿ 20, ಜೂನ್ 2025 ಶುಕ್ರವಾರ ಮುಸ್ಸಂಜೆ 4 ರಿಂದ 9 ರ ತನಕ ಪ್ರಪ್ರಥಮ ಬಾರಿಗೆ ಈದ್ ಸಮ್ಮಿಲನ ಬಹಳ ವಿಜೃಂಭಣೆಯಿಂದ ನೆರವೇರಿತು.
ಕೆಎಂವೈಎ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಡೆಸಿದ ಈದ್ ಸಮ್ಮಿಲನದಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕೆಎಂವೈಎ ದಮ್ಮಾಂ ಅಧ್ಯಕ್ಷ ಮುಹಮ್ಮದ್ ಮುಸ್ಥಫ ಆರಗ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಈದ್ ಮಿಲನದಲ್ಲಿ ಇಸ್ಮಾಯೀಲ್ ಕಾಟಿಪಳ್ಳ ದುಆ ಗೈದರು. ಅಹ್ಮದ್ ಸ್ವಾದಿಖ್ ಖಿರಾಅತ್ ಪಠಿಸಿದರು ಹಾಗೂ ಇಸ್ಮಾಯೀಲ್ ಕಾಟಿಪಳ್ಳರವರು ಅದರ ಸಾರಾಂಶವನ್ನು ವಿವರಿಸಿದರು.
ಅಬ್ದುಲ್ ಗಫೂರ್ ಕಾಟಿಪಳ್ಳ ವಿರಚಿತ ಸ್ವಾಗತ ಹಾಡನ್ನು ಮಧುರ ಕಂಠದಲ್ಲಿ ಅಬ್ದುಲ್ ಖಾದಿರ್ ಮುಆಝ್ ಕಾಟಿಪಳ್ಳ ಹಾಡಿ ಸಭಿಕರ ಮನಗೆದ್ದರು.
ಕೆಎಂವೈಎ ದಮ್ಮಾಂ ಈಷ್ಟರ್ನ್ ಪ್ರೋವಿನ್ಸ್ ನ ಮಾಜಿ ಅಧ್ಯಕ್ಷರುಗಳಾದ ಪಿ.ಎ. ರಹ್ಮಾನ್, ಬಿ.ಎಂ.ರಫೀಖ್, ಪಿ.ಮುಹಮ್ಮದ್ ಬಶೀರ್, ಗುಲಾಂ ನಝೀರ್, ನೌಶಾದ್ ರಶೀದ್ ಹಾಗೂ ಪ್ರಸಕ್ತ ಸಾಲಿನ ಉಪಾಧ್ಯಕ್ಷರುಗಳಾದ ಮುಹಮ್ಮದ್ ಇಜಾಝ್, ಮುಹಮ್ಮದ್ ಸ್ವಾದಿಖ್ ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕೆಎಂವೈಎ ದಮ್ಮಾಂ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಕಾಟಿಪಳ್ಳರವರು ಈದ್ ಮಿಲನ ಹಾಗೂ ನೂತನ ಹಿಜರಿ ವರ್ಷ ಮುಹರ್ರಂ ಸಂದೇಶವನ್ನು ನೀಡಿದರು.ಕೆಎಂವೈಎ ಮಾಜಿ ಉಪಾಧ್ಯಕ್ಷರುಗಳಾದ ಆರಿಫ್ ಪಿ.ಎಂ. ಮತ್ತು ಸೈಫುಲ್ಲಾ ಮುಹ್ಯಿದ್ದೀನ್ ರವರು ಸಂದರ್ಭೋಚಿತವಾಗಿ ಮಾತನಾಡಿದರು. ಮನ್ಸೂರ್ ಅಲೀ ಯವರು ಆರಿಸಿ ತೆಗೆದ Raffle ಡ್ರಾದಲ್ಲಿ ಮಾಝಿನ್ ರಫೀಖ್ ರವರಿಗೆ ಬಹುಮಾನ ನೀಡಲಾಯಿತು.
ಈದ್ ಸಮ್ಮಿಲನದ ಪೋಷ್ಟರನ್ನು ಸ್ಟೇಟಸ್ ನಲ್ಲಿ ಪ್ರದರ್ಶಿಸಿ 374 ಮಂದಿ ವೀಕ್ಷಿಸಿದ ಪ್ರಯುಕ್ತ ತ್ವಾಹಿರ್ ಅಲೀ ಶರೀಫ್ ರವರು Status ಗಿಫ್ಟ್ ನ್ನು ತನ್ನದಾಗಿರಿಸಿಕೊಂಡರು. ಕೆಎಂವೈಎ 35 ವರ್ಷಗಳ ಡೋಕುಮೆಂಟರಿ ಯನ್ನು ಮೀಡಿಯ ವಿಂಗ್ ಉಸ್ತುವಾರಿ ಶಾಫಿ ಇಮ್ರಾನ್ ಪ್ರದರ್ಶಿಸುವ ಜವಾಬ್ದಾರಿ ವಹಿಸಿದ್ದರು.
ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ರೀತಿಯ ಸ್ಫರ್ಧೆಗಳನ್ನು ಏರ್ಪಡಿಸಿ ಬಹುಮಾನ ಹಾಗೂ ಸರ್ಟಿಫಿಕೇಟ್ ಗಳನ್ನು ವಿತರಿಸಲಾಯಿತು.ಕ್ವಿಝ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ