ಮಂಗಳೂರು – ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ವಿದ್ಯಾರ್ಥಿಗಳ ಅಧಿಕೃತ ಒಕ್ಕೂಟ ಸುನ್ನೀ ಬಾಲ ಸಂಘ (SBS) ಇದರ ನೂತನ ಸಮಿತಿಗೆ ಚುನಾವಣೆ ಪ್ರಕ್ರಿಯೆಯು “ಉತ್ತಮ ಸಮಾಜದ ಉದಾತ್ತ ಪ್ರಜೆಗಳಾಗೋಣ” ಎಂಬ ಸಂದೇಶದೊಂದಿಗೆ ನಡೆಯಿತು.
ಚುನಾವಣೆಗೆ ಮುನ್ನುಡಿಯಾಗಿ ಮದ್ರಸ ಪ್ರಾಂಶುಪಾಲರಾದ ಅಕ್ಬರ್ ಹಿಮಮಿ ಸಖಾಫಿ ಕುಪ್ಪೆಟ್ಟಿ ಇವರ ನೇತೃತ್ವದಲ್ಲಿ ಗ್ರ್ಯಾಂಡ್ ಅಸೆಂಬ್ಲಿ ನಡೆಸಿ ತದ ನಂತರ ಚುನಾವಣಾ ಅಧಿಕಾರಿ ಹಾಫಿಲ್ ಇಸ್ಮಾಯಿಲ್ ಹನೀಫಿ ಕಂಚಿಲ ಇವರ ನೇತೃತ್ವದಲ್ಲಿ ಸ್ಟಾಫ್ ಕೌನ್ಸಿಲ್ ನ ಸಂಪೂರ್ಣ ಸಹಕಾರದೊಂದಿಗೆ ಮದ್ರಸ ಉಸ್ತುವಾರಿಗಳ ಮೇಲ್ನೋಟದಲ್ಲಿ ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಆಡಳಿತ ಸಮಿತಿಯ ಮಾರ್ಗದರ್ಶನದಲ್ಲಿ ಬಹಳ ಯಶಸ್ವಿಗಾಗಿ ಚುನಾವಣೆ ನಡೆಯಿತು.
ಮಾದ್ಯಮ,ಮೀಡಿಯಾ, ಮಿಲಿಟರಿ ಝಡ್ ,ಹೆಲ್ಪ್ ಡೆಸ್ಕ್ ,ವಿಶೇಷ ಮೆರುಗು ನೀಡಿತ್ತು .ಸದ್ರಿ ಚುನಾವಣೆಯು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸಂವಿಧಾನದ ಹಕ್ಕು ಚಲಾವಣೆಗೆ ಸ್ಫೂರ್ತಿಯಾಗಲಿದೆ ಮತ್ತು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ನಾಂದೀಯಾಗುವ ಮೂಲಕ ಉತ್ತಮ ಸಮಾಜದ ಉದಾತ್ತ ಪ್ರಜೆಗಳು ಆಗಲಿದ್ದಾರೆ ಎಂದು ಸ್ಥಳೀಯ ಖತೀಬರೂ,SJM ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆದ K.H.U ಶಾಫಿ ಮದನಿ ಅಲ್ ಅಝ್ಹರಿ ಚುನಾವಣೆಯ ಮುನ್ನ ನಡೆದ ಮುನ್ನುಡಿ ಭಾಷಣದಲ್ಲಿ ತಿಳಿಸಿದರು.18 ಅಭ್ಯರ್ಥಿಗಳು 4 ಕ್ಯಾಬಿನೆಟ್ ,149 ಮತದಾರರು ಮತ ಚಲಾಯಿಸುವ ಮೂಲಕ 596 ಮತ ಚಲಾವಣೆಯಾಗಿದ್ದು ಬುಧವಾರ ಸಂಜೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ ಎಂದು ಚುನಾವಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ