ಜಿದ್ದಾ: ಸೌದಿ ಅರೇಬಿಯಾದಲ್ಲಿ ವ್ಯಾಪಾರ ಸಂಸ್ಥೆಗಳನ್ನು ಪರಿಶೀಲಿಸುವ ಅಧಿಕಾರಿಗಳಿಗೆ ಕಾರ್ಮಿಕ ಇಲಾಖೆಯು ಹೆಚ್ಚಿನ ಅಧಿಕಾರವನ್ನು ವಹಿಸಿಕೊಟ್ಟಿದೆ. ನೌಕರರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ. ಹೊಸ ನಿಯಮವು ಯಾವುದೇ ಮುನ್ಸೂಚನೆ ನೀಡದೆ ಸಂಸ್ಥೆಗಳಿಗೆ ಪ್ರವೇಶಿಸಲು ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
ಕಾರ್ಮಿಕ ಕಾನೂನುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಅಧಿಕಾರಿಗಳು ಸಂಸ್ಥೆಗಳಲ್ಲಿ ಬಳಸುವ ಉಪಕರಣಗಳು ಮತ್ತು ಸಾಮಗ್ರಿಗಳನ್ನು ಪರಿಶೀಲಿಸಲಿದ್ದಾರೆ. ಭದ್ರತಾ ಸಮಸ್ಯೆಯಿದ್ದರೆ ಎಚ್ಚರಿಕೆ ನೀಡಲಾಗುವುದು. ತಪಾಸಣೆಗೆ ಬರುವ ಅಧಿಕಾರಿಗಳಿಗೆ ಅಗತ್ಯವಿರುವ ಶೈಕ್ಷಣಿಕ ಅರ್ಹತೆಯನ್ನೂ ಸಚಿವಾಲಯ ಸ್ಪಷ್ಟಪಡಿಸಿದೆ. ಪದವಿಯನ್ನು ಹೊಂದಿರುವ ಎರಡು ವರ್ಷಗಳಿಂದ ಕಡಿಮೆಯಲ್ಲದ ಅನುಭ ಹೊಂದಿರುವ ಸೌದಿ ಪ್ರಜೆಯಾಗಿರಬೇಕು ಇನ್ಸ್‌ಪೆಕ್ಟರ್. ಮತ್ತು ಅವರು ಗುರುತಿನ ದಾಖಲೆಯನ್ನು ಕೈಯಲ್ಲಿ ಇಟ್ಟುಕೊಳ್ಳಬೇಕು. ಇನ್ಸ್‌ಪೆಕ್ಟರ್ ಗಳ ಮೇಲ್ವಿಚಾರಣೆಗಾಗಿ ಪ್ರತ್ಯೇಕ ಏಜೆನ್ಸಿಗೂ ಅಧಿಕಾರವನ್ನು ವಹಿಸಲಾಗಿದೆ.
ತಪಾಸಣೆ ನಡೆಸುವ ವೇಳೆ ಕಾರ್ಮಿಕರು ಮತ್ತು ಮಾಲೀಕರ ವಾದವನ್ನೂ ಆಲಿಸಲಿದ್ದಾರೆ. ಕಾನೂನಿನ ಉಲ್ಲಂಘನೆಯನ್ನು ಗಮನಿಸಿದರೆ, ಪ್ರಥಮವಾಗಿ ಎಚ್ಚರಿಕೆ ನೀಡಲಾಗುತ್ತದೆ. ಪುನರಾವರ್ತಿತ ಉಲ್ಲಂಘನೆಗೆ ದಂಡ ವಿಧಿಸಲಾಗುವುದು. ಗಂಭೀರ ಉಲ್ಲಂಘನೆಯ ಸಂದರ್ಭದಲ್ಲಿ ಸರಿಪಡಿಸಲು ಕೇವಲ ಮೂರು ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಹಾಗೆ ಮಾಡಲು ವಿಫಲವಾದರೆ ಗರಿಷ್ಠ ದಂಡವನ್ನು ವಿಧಿಸಲಾಗುತ್ತದೆ. ಹೊಸ ನಿಯಮಗಳು ಸೌದಿ ಅರೇಬಿಯಾದಲ್ಲಿ ಕಾರ್ಮಿಕ ವಲಯವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು