ಚಿಕ್ಕಮಗಳೂರು ನಿವಾಸಿ ಸೈಯದ್ ಇಜಾಝ್ ಅಹ್ಮದ್ ರವರು ದಿನಾಂಕ 15/04/2025 ರಂದು ಸೌದಿ ಅರೇಬಿಯಾದ ಮದೀನದ ಸಮೀಪವಿರುವ ಯಾಂಬುವಿನಲ್ಲಿ ಮರಣಹೊಂದಿದ್ದು ಅವರ ಅಂತ್ಯಕ್ರಿಯೆಯನ್ನು ಯಾಂಬು ಬಲದ್ ನಲ್ಲಿರುವ ಶಾತಿ ಖಬರ್ ಸ್ಥಾನದಲ್ಲಿ ಕೆಸಿಎಫ್ ಯಾಂಬು ಸೆಕ್ಟರ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಸಲಾಯಿತು.

ಅಂತ್ಯಕ್ರಿಯೆಗೆ ಬೇಕಾದ ಹಲವಾರು ಕಾನೂನಾತ್ಮಕ ದಾಖಲೆ ಪತ್ರಗಳು ಅದರಂತೆ ಭಾರತೀಯ ರಾಯಭಾರಿ ಕಚೇರಿ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ ಸೇರಿದಂತೆ ವಿವಿಧ ಕಡೆಗಳಿಂದ ಬೇಕಾದ ಕಡತಗಳನ್ನು ಸರಿಪಡಿಸಲು ಸೌದಿ ಅರೇಬಿಯಾದ ಕೆಸಿಎಫ್ ಯಾಂಬು ಸಾಂತ್ವನ ಇಲಾಖೆಯ ಕಾರ್ಯದರ್ಶಿ ಇಲ್ಯಾಸ್ ಮುಕ್ಕ ರವರ ನೇತೃತ್ವದಲ್ಲಿ ಸೆಕ್ಟರ್ ಅಧ್ಯಕ್ಷರಾದ ಇಕ್ಬಾಲ್ ಕೃಷ್ಣಾಪುರ, ಅಬ್ದುಲ್ ರಝಾಕ್ ಹಾಜಿ ಶಿರ್ಲಾಲ್, ರಬೀಹ್ ಕೂಳೂರು, ಹಾರಿಸ್ ವೇಣೂರ್, ಸಹಿತ ಅನೇಕ ನಾಯಕರ ಸಹಕಾರದೊಂದಿಗೆ ನಡೆಯಿತು.
ಯಾಂಬು ಬಲದ್ ನಲ್ಲಿರುವ ಮಸ್ಜಿದ್ ಜಾಮಿಹ್ ಅಲ್ ಕಬೀರ್ ನಲ್ಲಿ 17-04-2025 ಆಸರ್ ನಮಾಜಿನ ಬಳಿಕ ಮಯ್ಯತ್ ನಮಾಝ್ ನಿರ್ವಹಿಸಿ ಶಾತಿ ಖಬರ್ ಸ್ಥಾನದಲ್ಲಿ ದಫನ ಕಾರ್ಯ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಕೆಸಿಎಫ್ ಯಾಂಬು ಸೆಕ್ಟರ್ ನಾಯಕರು, ಸಹಕಾರ್ಯಕರ್ತರು, ಆರ್ ಎಸ್ ಸಿ, ಐಸಿಎಫ್ ಕಾರ್ಯಕರ್ತರು ಹಾಗೂ ಸ್ಥಳೀಯರು ದಫನ ಕಾರ್ಯದಲ್ಲಿ ಸಹಕರಿಸಿದರು. ಮೃತರು ಎರಡು ಮಕ್ಕಳು, ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ