ಬೆಂಗಳೂರು: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯಗಳು ರಾಕ್ಷಸೀಯವಾಗಿದ್ದು, ವಿಶ್ವದ ಜನತೆಯು ಇದರ ವಿರುದ್ಧ ಜಾಗೃತಗೊಳ್ಳಬೇಕು ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಒಪ್ಪಂದಗಳನ್ನು ಉಲ್ಲಂಘಿಸಿ ಇಸ್ರೇಲ್ ಮುಂದುವರಿಸುತ್ತಿರುವ ಹಿಂಸಾಚಾರವು ದುರಹಂಕಾರದ ಸಂಕೇತವಾಗಿದ್ದು, ಜಗತ್ತು ಇದನ್ನು ಒಗ್ಗಟ್ಟಾಗಿ ವಿರೋಧಿಸಬೇಕೆಂದು ಕಾಂತಪುರಂ ಹೇಳಿದರು.
ಪ್ರಾರ್ಥನೆಯು ವಿಶ್ವಾಸಿಗಳ ಅತ್ಯಂತ ದೊಡ್ಡ ಆಯುಧವಾಗಿದ್ದು, ಪವಿತ್ರ ಮಾಸದಲ್ಲಿ ನಾವು ವಿಶ್ವ ಶಾಂತಿ ಮತ್ತು ಪ್ಯಾಲೆಸ್ತೀನ್ ವಿಮೋಚನೆಗಾಗಿ ಪ್ರಾರ್ಥಿಸಬೇಕೆಂದು ಎ.ಪಿ ಉಸ್ತಾದರು ಬೆಂಗಳೂರಿನಲ್ಲಿ ನಡೆದ ರೂಹಾನಿ ಇಜ್ತಿಮಾದ ಸಮಾರೋಪ ಸಮಾರಂಭವನ್ನು ಉದ್ಘಾಟಿಸುತ್ತಾ ಹೇಳಿದರು.

ಸಂಜೆ 4 ಗಂಟೆಗೆ ಆರಂಭವಾದ ಕಾರ್ಯಕ್ರಮ ಬೆಳಗಿನ ಜಾವ 4 ಗಂಟೆಗೆ ಮುಕ್ತಾಯವಾಯಿತು. ಸಯ್ಯಿದ್ ಝೈನುದ್ದೀನ್ ತಂಙಳ್ ಕೂರಿಕುಝಿ ದಿಕ್ರ್ ಮಜ್ಲಿಸ್ ಮತ್ತು ಸಮಾರೋಪ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಡಾ. ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ, ಡಾ. ಮುಹಮ್ಮದ್ ಅಫ್ಸಲುದ್ದೀನ್ ಜುನೈದ್(ಸಿರಾಜ್ ಬಾಬಾ), ಹಝ್ರತ್ ಮೌಲಾನಾ ಮುಹಮ್ಮದ್ ಹಾರೂನ್, ಸನ್ಮಾನ್ಯ ಸ್ಪೀಕರ್ ಯು.ಟಿ ಖಾದರ್, ಸಿ.ಎಂ. ಇಬ್ರಾಹಿಂ, ಎನ್.ಕೆ.ಎಂ ಶಾಫಿ ಸಅದಿ, ಎಸ್.ಅಬ್ದುಲ್ ರಹ್‌ಮಾನ್ ಹಾಜಿ ಮತ್ತಿತರರು ಮಾತನಾಡಿದರು.
ಮುಸ್ಲಿಂ ಜಮಾಅತ್ ಅಧ್ಯಕ್ಷ ಶಬೀರಲಿ ಹಝ್ರತ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ಮಾನ್ ಶರೀಫ್ ಸ್ವಾಗತಿಸಿ, ಜಲೀಲ್ ಹಾಜಿ ಧನ್ಯವಾದ ಅರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ