ಪುತ್ತೂರು: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ 2025 ರಲ್ಲಿ ನಡೆಸಿದ ಮದ್ರಸ ಪಬ್ಲಿಕ್ ಪರೀಕ್ಷೆಯ 10 ನೇ ತರಗತಿಯಲ್ಲಿ ಎಲ್ಲಾ ನಾಲ್ಕು ವಿಷಯಗಳಲ್ಲೂ ತಲಾ 100 ಅಂಕಗಳೊಂದಿಗೆ ಒಟ್ಟು 400 ರಲ್ಲಿ 400 ಅಂಕ ಪಡೆದು, ಕೆಮ್ಮಾರ ಅಲ್ ಮದ್ರಸತುಲ್ ಕುತುಬಿಯ್ಯ ಸೆಕೆಂಡರಿ ಮದ್ರಸ ವಿದ್ಯಾರ್ಥಿನಿ ಝೈಬುನ್ನಿಸಾ ರಾಷ್ಟ್ರ ಮಟ್ಟದಲ್ಲಿ ರ್‍ಯಾಂಕ್ ಪಡೆದು ಮದ್ರಸಕ್ಕೆ ಕೀರ್ತಿ ತಂದಿರುತ್ತಾಳೆ. ಈ ವಿದ್ಯಾರ್ಥಿನಿಯು, ಅಬ್ದುಲ್ ಲತೀಫ್ ಝುಹ್ರಿ ಹಾಗೂ ಹಬೀಬಾ ದಂಪತಿಗಳ ಪುತ್ರಿ ಆಗಿರುತ್ತಾಳೆ.
ಈ ವರ್ಷ ಪಬ್ಲಿಕ್ ಪರೀಕ್ಷೆ ಬರೆದ ಐದನೇ ತರಗತಿಯ ಹನ್ನೆರಡು, ಏಳನೇ ನೇ ತರಗತಿಯ ಹದಿನೈದು, ಹತ್ತನೇ ತರಗತಿಯ ನಾಲ್ಕು ವಿದ್ಯಾರ್ಥಿಗಳು ಅತ್ಯಧಿಕ ಅಂಕ ಪಡೆದು ಉತ್ತೀರ್ಣರಾಗಿರುತ್ತಾರೆ.
ಐದನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಹಾಶಿಮ್ 600 ರಲ್ಲಿ 550 ಹಾಗೂ ಏಳನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಅಫ್ರಾ 600 ರಲ್ಲಿ 582 ಅಂಕ ಪಡೆದು A+ ಗ್ರೇಡ್ ನೊಂದಿಗೆ, ತರಗತಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ರ್‍ಯಾಂಕ್ ಪಡೆದ ಝೈಬುನ್ನಿಸಾ’ಳಿಗೂ, A+ ಪಡೆದ ಫಾತಿಮತ್ ಅಫ್ರಾ’ಳಿಗೂ, ಅತ್ಯಧಿಕ ಅಂಕ ಪಡೆದು, ನಮ್ಮ ಮದ್ರಸಕ್ಕೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೂ, ತರಗತಿ ಅಧ್ಯಾಪಕರಿಗೂ, ಪ್ರೋತ್ಸಾಹಿಸಿದ ರಕ್ಷಕರು, ಆಡಳಿತ ಸಮಿತಿಗೂ ಮದ್ರಸಾ ಮುಖ್ಯೋಪಾಧ್ಯಾಯರಾದ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ರವರು ಹೃತ್ಪೂರ್ವಕ ಕೃತಜ್ಞತೆ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು, ಅಲ್ ಮದ್ರಸತುಲ್ ಕುತುಬಿಯ್ಯ ಸೆಕೆಂಡರಿ ಮದ್ರಸ, MJM ಕೆಮ್ಮಾರ ಅಭಿನಂದನೆಗಳನ್ನು ಸಲ್ಲಿಸಿದೆ.