ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ರಿ.) ಎಸ್ಸೆಸ್ಸೆಫ್ ಉಪ್ಪಳ್ಳಿ ಯೂನಿಟ್ ವಾರ್ಷಿಕ ಕೌನ್ಸಿಲ್ ಇತ್ತೀಚೆಗೆ ಯೂನಿಟ್ ಕಛೇರಿಯಲ್ಲಿ ನಡೆಯಿತು. ಶಾಖಾಧ್ಯಕ್ಷರಾದ ಸಲ್ಮಾನ್ ರವರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಸಭೆಯನ್ನು ಎಸ್ಸೆಸ್ಸೆಫ್ ಚಿಕ್ಕಮಗಳೂರು ಡಿವಿಷನ್ ಅಧ್ಯಕ್ಷರಾದ ಫಾಝಿಲ್ ಸಅದಿ ಶಾಂತಿನಗರ ಉದ್ಘಾಟಿಸಿ ಶುಭ ಹಾರೈಸಿದರು.
ಸ್ಥಳೀಯ ಮುದರ್ರಿಸರಾದ ಮಾಚಾರು ಇಸ್ಮಾಯಿಲ್ ಸಅದಿಯವರು ಸಕಾಲಿಕ ವಿಷಯದಲ್ಲಿ ಹಿತೋಪದೇಶ ನೀಡಿದರು. ರಾಜ್ಯ ಮಾಜಿ ಸದಸ್ಯರಾದ ಕೊಂಬಾಳಿ ಕೆ.ಎಂ.ಎಚ್ ಝುಹುರಿ ಯವರು ಸಂಘಟನಾ ಕಾರ್ಯಾಚರಣೆ ಬಗ್ಗೆ ಮಾತನಾಡಿದರು. ವಾರ್ಷಿಕ ವರದಿ ಹಾಗೂ ವಾರ್ಷಿಕ ಆಯ – ವ್ಯಯ ಲೆಕ್ಕ ಮಂಡಿಸಿದ ಬಳಿಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸಲ್ಮಾನ್ ಬಂಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಉವೈಸ್, ಕೋಶಾಧಿಕಾರಿ ಇರ್ಫಾನ್ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಸಮದ್, Q.D ಕಾರ್ಯದರ್ಶಿಯಾಗಿ ಮುನೀರ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ರಶೀದ್, G.D ಕಾರ್ಯದರ್ಶಿಯಾಗಿ ಶಾನಿಫ್, ದಅ್’ವಾ ಕಾರ್ಯದರ್ಶಿಯಾಗಿ ಮುಬೀನ್, ರೈಂಬೋ ಕಾರ್ಯದರ್ಶಿಯಾಗಿ ಫಹೀಂ ಶಾ, ಮೀಡಿಯಾ ಕಾರ್ಯದರ್ಶಿಯಾಗಿ ಅಫ್ರೀದ್ ಸುಲೈಮಾನ್, ಕಾರ್ಯಕಾರಿ ಸದಸ್ಯರಾಗಿ ಸಿನಾನ್, ಅಶ್ರಫ್, ಮಶೂದ್, ಸಮೀರ್, ರಾಝಿಖ್, ಸವಾದ್, ಸಲ್ಮಾನ್, ಶಂಸುದ್ದೀನ್, ಉಮರ್, ಜುನೈದ್, ಸುಹೈಲ್,ತಬ್ರೀಝ್ ಎಂಬವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಂಸುದ್ದೀನ್ ಬದ್ರಿಯಾ, ರಾಜ್ಯ ಸದಸ್ಯರಾದ ನಿಝಾಂ ಬದ್ರಿಯಾ, ಜಿಲ್ಲಾ ನಾಯಕರಾದ ನೌಶಾದ್ ಬದ್ರಿಯಾ, ತಮೀಮ್ ಪಿ.ಜೆ. ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಉವೈಸ್ ಸ್ವಾಗತಿಸಿ, ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ