janadhvani

Kannada Online News Paper

ಇಂದು ಕಾವಲ್ ಕಟ್ಟೆ ಹಝ್ರತ್ ನೇತೃತ್ವದಲ್ಲಿ ಕುದ್ರೋಳಿ ಯಲ್ಲಿ ಜಲಾಲಿಯ್ಯ ರಾತೀಬ್

ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷ ಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮದ 7 ನೇ‌ ದಿವಸವಾದ ಇಂದು ಪೆಬ್ರವರಿ 06 ಗುರುವಾರ ಇಶಾ ಬಳಿಕ ಡಾ ಮಹಮ್ಮದ್ ಪಾಝಿಲ್ ರಝ್ವಿ ಕಾವಲ್ ಕಟ್ಟೆ ನೇತೃತ್ವದಲ್ಲಿ ಜಲಾಲಿಯ್ಯ ರಾತೀಬ್ ನಡೆಯಲಿದೆ. ಈ ಸಂದರ್ಭದಲ್ಲಿ ಮಸೂದ್ ಸ ಅದಿ ಯೂ ಭಾಗವಹಿಸಲಿದ್ದಾರೆ.

ಸಂದಲ್ ಮೆರವಣಿಗೆ:- ಇಂದು ಮಗ್ರಿಬ್ ನಮಾಝ್ ಬಳಿಕ ಜೀನತ್ ಭಕ್ಷ್ ಕೇಂದ್ರ ಮಸೀದಿಯಿಂದ ಜಲಾಲ್ ಮಸ್ತಾನ್ ದರ್ಗಾ ಝಿಯಾರತ್ ನೊಂದಿಗೆ ಬಂದರ್ ನಿಂದ ಕುದ್ರೋಳಿ ತನಕ ದಪ್ಪು ತಂಡಗಳು ತಾಲೀಮು ತಂಡಗಳೊಂದಿಗೆ ಬ್ರಹತ್ ಸಂದಲ್ ಮೆರವಣಿಗೆ ನಡೆಯಲಿದೆ. ಎಂದು ದರ್ಗಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ತಿಳಿಸಿದ್ದಾರೆ.